ಬೆಂಗಳೂರು: ರಾಜ್ಯಾದ್ಯಂತ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಹೀಗಾಗಿ ಬಿಪಿಎಲ್ ಕಾರ್ಡ್ ದಾರರು ಈ ನೋಟಿಸ್ ಬಂದರೆ ಸುಮ್ಮನೇ ಕೂರದೇ ತಪ್ಪದೇ ಗಮನಿಸಿ.
ರಾಜ್ಯಾದ್ಯಂತ ಬರೋಬ್ಬರಿ 12,68,097 ಅನುಮಾನಾಸ್ಪದ ಕಾರ್ಡ್ ಬಂದಿದೆ. ಈ ಪೈಕಿ 8 ಲಕ್ಷ ರೇಷನ್ ಕಾರ್ಡ್ ರದ್ದುಗೊಳಿಸಲು ಆಹಾರ ಇಲಾಖೆ ಮುಂದಾಗಿದೆ. ಅನುಮಾನವಿರುವ ಕಾರ್ಡ್ ಗಳಿಗೆ ಸರ್ಕಾರ ನೋಟಿಸ್ ನೀಡಲಿದೆ.
ಅನರ್ಹವಾಗಿರುವ ಕಾರ್ಡ್ ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ಪೈಕಿ 8 ಲಕ್ಷ ಅನುಮಾನಾಸ್ಪದ ಬಿಪಿಎಲ್ ಕಾರ್ಡ್ ದಾರರಿಗೆ ಯಾಕೆ ಕಾರ್ಡ್ ರದ್ದು ಮಾಡಬಾರದು ಎಂದು ನೋಟಿಸ್ ನೀಡಲಿದೆ. ಈ ನೋಟಿಸ್ ನಿಮಗೂ ಬಂದರೆ ಸೂಕ್ತ ಕಾರಣಗಳೊಂದಿಗೆ ಉತ್ತರಿಸಬೇಕು.
ಇಲ್ಲದೇ ಹೋದರೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ. ಮಾನದಂಡ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿ ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಬಹುದು. ನೋಟಿಸ್ ತಲುಪಿದ ಮೂರು ದಿನಗಳೊಳಗಾಗಿ ಅಗತ್ಯ ದಾಖಲೆ ಜೊತೆಗೆ ನೋಟಿಸ್ ಗೆ ಉತ್ತರ ನೀಡಬೇಕು.