Select Your Language

Notifications

webdunia
webdunia
webdunia
webdunia

ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಬೊಮ್ಮಯಿ ಹೇಳಿದ್ದಾರೆ- ವಿಜಯೇಂದ್ರ‌

ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಬೊಮ್ಮಯಿ ಹೇಳಿದ್ದಾರೆ- ವಿಜಯೇಂದ್ರ‌
bangalore , ಸೋಮವಾರ, 13 ನವೆಂಬರ್ 2023 (14:42 IST)
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗಮಿಸಿದ್ರು.ಆರ್ ಟಿ ನಗರದಲ್ಲಿರಿವ ಮಾಜಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿ ಮಾಜಿ ಸಿಎಂ ಬೊಮ್ಮಾಯಿ ಆಶೀರ್ವಾದ ವಿಜಯೇಂದ್ರ ಪಡೆದಿದ್ದಾರೆ.

ಬೊಮ್ಮಾಯಿ ಭೇಟಿ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌ ಪ್ರತಿಕ್ರಿಯಿಸಿದ್ದಾರೆ.ಹಿರಿಯರಾದ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿ.ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ವನ್ನು ಸದಾ ಇರಬೇಕೆಂದು ಪ್ರಾರ್ಥನೆ ಅವರಲ್ಲಿ ಮಾಡಿದ್ದೇನೆ.ಅವ್ರು ಬಹಳ ಸಂತೋಷ ಪಟ್ಟರು, ವರಿಷ್ಠರು ಒಳ್ಳೆಯ ನಿರ್ಧಾರ ಮಾಡಿದ್ದಾರೆ.ನಿನ್ನ ನೇಮಕದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ.ನಾನಷ್ಟೇ ಅಲ್ಲ, ಎಲ್ಲ ಹಿರಿಯರು ನಿನ್ನ ಜೊತೆ ಇರ್ತೇವೆ ಎಂದಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಿದೆ.ರಾಜ್ಯಾದ್ಯಂತ ನಿನ್ನ ನೇತೃತ್ವದಲ್ಲಿ ಪ್ರವಾಸ ಮಾಡಿ  ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡೋಣ ಎಂದಿದ್ದಾರೆ.ಜೊತೆಗೆ ಬುಧುವಾರ ಅಧಿಕಾರ ಸ್ವೀಕಾರ ಮಾಡೋವಾಗ ಬರೋದಾಗಿ ಹೇಳಿದ್ದಾರೆ.ಆರ್ ಟಿ ನಗರದ ಬಸವರಾಜ್ ಬೊಮ್ಮಾಯಿ ನಿವಾಸದ ಬಳಿ ವಿಜಯೇಂದ್ರ‌ ಹೇಳಿದ್ದಾರೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಹಬ್ಬದ ಖರೀದಿಗೆ ಮುಗಿಬಿದ್ದ ಜನರು