Select Your Language

Notifications

webdunia
webdunia
webdunia
webdunia

ಬೊಮ್ಮನಹಳ್ಳಿ ಶಾಸಕ ಸತೀಶ್ರೆ ಡ್ಡಿ ಮನೆ ಆವರಣದಲ್ಲಿ ಎರಡು ದುಬಾರಿ ಕಾರು

expensive cars in house
bangalore , ಮಂಗಳವಾರ, 17 ಆಗಸ್ಟ್ 2021 (21:49 IST)
ಬೊಮ್ಮನಹಳ್ಳಿ ಶಾಸಕ ಸತೀಶ್? ರೆಡ್ಡಿ ಅವರ ಮನೆ ಆವರಣದಲ್ಲಿ ನಿಲ್ಲಿಸಿದ್ದ ಎರಡು ದುಬಾರಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.  
ಗಾರ್ವೆಬಾವಿಪಾಳ್ಯದ ಸಾಗರ್ ತಾಪ (19),ಬಂಡೆಪಾಳ್ಯದ ನವೀನ್ ಕಾಳಪ್ಪ (22), ಶ್ರೀಧರ್‍ಗೌಡ (20)ನನ್ನು ಸೋಮವಾರ ಪೆÇಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಒಬ್ಬೊಬ್ಬರು ಒಂದೊಂದು ರೀತಿಯ ಗೊಂದಲಕಾರಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಹಾಗೂ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು. ಜತೆಗೆ ರೌಡಿಶೀಟರ್ ಕೇಬಲ್ ಸೋಮಶೇಖರ್ ಎಂಬಾತ ಕೃತ್ಯದ ಪ್ರಮುಖ ಸೂತ್ರಧಾರಿ ಎಂಬ ಸುದ್ದಿಯೂ ಹರಿದಾಡುತ್ತಿತ್ತು.
 ಆರೋಪಿಗಳು ಈ ಬಗ್ಗೆ ಸಣ್ಣ ಸುಳಿವು ನೀಡಿದ್ದರು. ಹೀಗಾಗಿ, ಈ ಎಲ್ಲ ಮಜಲುಗಳಲ್ಲೂ ತನಿಖೆ ನಡೆಸಬೇಕಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಆರೋಪಿಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಮಕ್ಕಳಲ್ಲಿ ಕೋವಿಡ್ ಸೊಂಕು ಪ್ರಮಾಣದ ಅಂಕಿ ಅಂಶಗಳಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ