Publish Date: Fri, 05 Jan 2024 (21:00 IST)
Updated Date: Fri, 05 Jan 2024 (20:48 IST)
ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಡಲಾಗಿದೆ ,ಬೆಳಗ್ಗೆ ಬ್ಲಾಸ್ಟ್ ಆಗುತ್ತೆ ಅಂತಾ ಬೆದರಿಕೆ ಬಂದಿದೆ.ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ.ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತೆ ಅಂತಾ ಮೇಲ್ ಹಾಕಿ ಬೆದೆರಿಕೆ ಹಾಕಿದ್ದಾರೆ.Morgue999lolಎಂಬ ಮೇಲ್ ಐಡಿ ಮೂಲಕ ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆ.
ಉಗ್ರಸಂಘಟೆನೆಯೊಂದರ ಹೆಸರು ಉಲ್ಲೇಖಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.Terrorizers 111 ಎಂಬ ಉಗ್ರ ಸಂಘಟನೆಯ ಹೆಸ್ರು ಉಲ್ಲೇಖಿಸಿ ಬೆದರಿಕೆ ಹಾಕಿದ್ದು,ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮ್ಯೂಸಿಯಂಗೆ ಡಾಗ್ ಸ್ಕ್ವಾಡ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪರಿಶೀಲನೆ ನಡೆಸಿರುವ ಪೊಲೀಸರು ಸದ್ಯ ಯಾವುದೇ ರೀತಿಯ ಸ್ಪೋಟಕ ಪತ್ತೆಯಾಗಿಲ್ಲ ಎಂದಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪರಿಶೀಲನೆ ವೇಳೆ ಹುಸಿ ಬಾಂಬ್ ಬೆದರಿಕೆ ಅನ್ನೋದು ಪತ್ತೆಯಾಗಿದೆ.ಪರಿಶೀಲನೆ ಮುಗಿಸಿ ಬಾಂಬ್ ಸ್ಕ್ವಾಡ್ ಹಾಗೂ ಪೊಲೀಸರು ತೆರಳಿದ್ದಾರೆ.