Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರ ಏರಿಕೆ

ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರ ಏರಿಕೆ
ಬೆಂಗಳೂರು , ಮಂಗಳವಾರ, 26 ಮೇ 2020 (08:21 IST)
ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರದಲ್ಲಿ ಸ್ವಲ್ಪ ಏರಿಕೆ ಮಾಡಿದ್ದು, ಟಿಕೆಟ್ ದರ ರೌಂಡ್ ಫಿಗರ್ ಮಾಡಿರುವುದಾಗಿ ಬಿಎಂಟಿಸಿ ಬಸ್ ನಿರ್ವಾಹಕರು ಮಾಹಿತಿ ನೀಡಿದ್ದಾರೆ.


17 ರೂಪಾಯಿ ಇದ್ದ ಟಿಕೆಟ್ ದರ 20 ರೂ.ಗೆ , 19 ರೂಪಾಯಿ ಇದ್ದ ಟಿಕೆಟ್ ದರ 20ರೂಗೆ , 23 ರೂಪಾಯಿ ಇದ್ದ ಟಿಕೆಟ್ ದರ 25ರೂ.ಗೆ ಏರಿಕೆಯಾಗಿದೆ. ಚಿಲ್ಲರೆ ಸಮಸ್ಯೆಯಾಗದಂತೆ ಟಿಕೆಟ್ ದರ ಏರಿಕೆಯಾಗಿದೆ. ಆದರೆ ಎಂದಿನಂತೆ 70ರೂ.ನ ದಿನದ ಪಾಸ್ ಇರಲಿದೆ.


ಹಾಗೇ 70ರೂನ ಬಿಎಂಟಿಸಿ ದಿನದ ಪಾಸ್ ಕಡ್ಡಾಯ ಕೈಬಿಟ್ಟು ಟಿಕೆಟ್ ನೀಡಿ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡಿದ ಹಿನ್ನಲೆ ಬೆಂಗಳೂರಿನಲ್ಲಿ ಬಿಎಂಟಿಸಿ ಪ್ರಯಾಣಕ್ಕೆ ಜನರು ಆಸಕ್ತಿ ತೋರಿದ್ದು, ಇಂದು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮವಾಗಿ ಮದ್ಯವನ್ನು ಸಾಗಿಸುತ್ತಿದ್ದ ಮೂವರ ಬಂಧನ