Publish Date: Sat, 09 Apr 2022 (16:31 IST)
Updated Date: Sat, 09 Apr 2022 (14:35 IST)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈಗ ಸಾಲದ ಸುಳಿಯತ್ತ ಸಾಗುತ್ತಿದೆ. ಕೋಟಿ ಕೋಟಿ ಸಾಲ ಮಾಡಿದ್ದರಿಂದ ತನ್ನ ಕಟ್ಟಡವನ್ನೇ ಅಡವಿಡುವ ಹಂತಕ್ಕೆ ಹೋಗಿದೆ. ರಾಜಧಾನಿ ಜನರ ಜೀವನಾಡಿಯಾದ, ದೇಶದ ನಂಬರ್ 1 ಸಾರಿಗೆ ಸಂಸ್ಥೆ ಬಿಎಂಟಿಸಿ ಸಾಲದ ಶೂಲದಿಂದ ಹೊರಬರಲು ಆಗುತ್ತಿಲ್ಲ.
ಸಾಲಕ್ಕಾಗಿ ಸಂಸ್ಥೆಯ ಕಟ್ಟಡ ಹಾಗೂ ಸ್ಥಳವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ. 160 ಕೋಟಿ ರೂ. ಹಾಗೂ 230 ಕೋಟಿ ರೂ. ಸಾಲ ಪಡೆಯಲು ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇಡಲಾಗಿದೆ ಎಂದು ಹೇಳಲಾಗಿದೆ.