Webdunia - Bharat's app for daily news and videos

Install App

ಪ್ರಯಾಣಿಕರಿಗೆ ಶಾಕ್ ನೀಡಿದ ಬಿಎಂಟಿಸಿ

Webdunia
ಶನಿವಾರ, 31 ಡಿಸೆಂಬರ್ 2022 (15:28 IST)
ಹೊಸವರ್ಷದ ಮೊದಲ ವಾರದಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ನಿರಾಸೆ ಉಂಟಾಗಿದೆ.ವೋಲ್ವೋ ಬಸ್ ಪಾಸ್ ದರ ಹೆಚ್ಚಿಸಿ ಆದೇಶ ಬಿಎಂಟಿಸಿ  ಹೊರಡಿಸಿದೆ.
 
ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು,ಇಂಧನ ಬೆಲೆಯ ನಿರಂತರ ಏರಿಕೆ ಹಿನ್ನಲೆ, ಬಿಎಂಟಿಸಿ ಸಂಸ್ಥೆಯ ಆರ್ಥಿಕ ನಷ್ಟ ಸರಿದೂಗಿಸಲು ತೀರ್ಮಾನ ಮಾಡಿರುವ ಹಿನ್ನೆಲೆ ಪಾಸ್ ಗಳ ದರ ಹೆಚ್ಚಿಸಿರುವುದಾಗಿ ಬಿಎಂಟಿಸಿ ತಿಳಿಸಿದೆ.
 
ವಜ್ರ ( ವೋಲ್ವೋ) ಮಾಸಿಕ ದರ ಪ್ರಸ್ತುತ ವಜ್ರ ಮಾಸಿಕ ದರ 1428+ ಜಿಎಸ್ಟಿ 72= ಒಟ್ಟು 1500 ರೂಪಾಯಿಗಳಿತ್ತು.ಸದ್ಯ ಪರಿಷ್ಕೃತ ವಜ್ರ ಮಾಸಿಕ ಪಾಸಿನ ದರ 1714.29 ಪೈಸೆ + ಜಿಎಸ್ಟಿ 85.71= ಒಟ್ಟು 1800 ರೂಪಾಯಿಯಾಗಿದೆ.
 
ವಜ್ರ ವೋಲ್ವೋ ದೈನಿಕ ಪಾಸು ದರ ಎಷ್ಟು.!?
 
ಪ್ರಸ್ತುತ ವಜ್ರ ದೈನಿಕ ಪಾಸಿನ ದರ 95 + ಜಿಎಸ್ಟಿ 5 = 100 ರೂಪಾಯಿ ಇತ್ತು
 
ಪರಿಷ್ಕೃತ ದರ 114.29+ 5.21= 120 ರೂಪಾಯಿಗೆ ಹೆಚ್ಚಳ
 
ಇದರ ಜೊತೆಗೆ ಮಾಸಿಕ ಪಾಸ್ ತೆಗೆದುಕೊಂಡವರಿಗೆ ಮತ್ತೊಂದು ಶಾಕ್ ನೀಡಿದೆ.ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಓಡಾಟ ನಡೆಸೋ ಅಗಿಲ್ಲ.ಭಾನುವಾರಗಳಂದು ಸಾಮಾನ್ಯ ಪಾಸುದಾರರು ಹಾಗೂ ಹಿರಿಯ ನಾಗರಿಕರು ಪಾಸ್ ನಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.ಪಾಸ್ ಬಳಸಿ ಉಚಿತವಾಗಿ ಭಾನುವಾರ ಸಂಚರಿಸಲಾಗುತ್ತಿತ್ತು, ಇನ್ಮುಂದೆ ಭಾನುವಾರ ಪಾಸ್ ಬಳಸಿ ಓಡಾಟ ಇಲ್ಲ ಎಂದು ಬಿಎಂಟಿಸಿ ತಿಳಿಸಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೋ ಹಳದಿ ಲೈನ್ ನಲ್ಲಿ ಇದುವರೆಗೆ ಪ್ರಯಾಣಿಸಿದವರೆಷ್ಟು, ಸಿಎಂ ಮಾಹಿತಿ ಇಲ್ಲಿದೆ

ಬಿಕ್ಲು ಶಿವು ಮರ್ಡರ್ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಗೆ ರಿಲೀಫ್

ಗವಿಸಿದ್ದಪ್ಪ ಕುಟುಂಬದವರಿಗೂ 50 ಲಕ್ಷ ರೂ ಕೊಡಿ: ವಿಜಯೇಂದ್ರ ಆಗ್ರಹ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments