Select Your Language

Notifications

webdunia
webdunia
webdunia
webdunia

ಇನ್ಮುಂದೆ ಬಿಎಂಟಿಸಿ ಬಸ್ ಗೂ ಬುಕಿಂಗ್ ಸೌಲಭ್ಯ?!

ಬಿಎಂಟಿಸಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ನಲ್ಲಿ ಯಾವತ್ತೂ ರಶ್. ಹೇಗಪ್ಪಾ ಆರಾಮವಾಗಿ ಪ್ರಯಾಣಿಸುವುದು ಎಂದು ಚಿಂತೆ ಮಾಡೋರಿಗೆ ಒಂದು ಒಳ್ಳೆ ಸುದ್ದಿ ಬಂದಿದೆ.

ಕೆಎಸ್ ಆರ್ ಟಿಸಿ ಮಾದರಿಯಲ್ಲಿ ಇನ್ನು ಬಿಎಂಟಿಸಿ ಬಸ್ ನಲ್ಲೂ ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ. ಈ ಮೂಲಕ ಪ್ರಯಾಣಿಕರು ಆರಾಮವಾಗಿ ಸೀಟ್ ನಲ್ಲಿ ಕುಳಿತು ಪ್ರಯಾಣಿಸಲು ಅನುಕೂಲ ಮಾಡಲು ಯೋಜನೆ ರೂಪಿಸುತ್ತಿದೆ.

ಜತೆಗೆ ನಷ್ಟದಲ್ಲಿರುವ ತನ್ನ ಆದಾಯ ಸುಧಾರಿಸಲು ಈ ಮಾರ್ಗ ಕಂಡುಕೊಳ್ಳಲು ಹೊರಟಿದೆ. ಹಾಗಿದ್ದರೂ ಇಂತಹದ್ದೊಂದು ನಿಯಮ ತರುವ ಮೊದಲು ಮೊದಲು ನಾಗರಿಕರ ಬಳಿ ಅಭಿಪ್ರಾಯ ಸಂಗ್ರಹಿಸಲಿದೆ. ಬಳಿಕವೇ ಬಿಎಂಟಿಸಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅಮಾನ್ಯಗೊಂಡ 500, 1000 ರೂ. ನೋಟುಗಳು ಏನಾದವು ಗೊತ್ತಾ?!