Select Your Language

Notifications

webdunia
webdunia
webdunia
webdunia

ಅಮಾನ್ಯಗೊಂಡ 500, 1000 ರೂ. ನೋಟುಗಳು ಏನಾದವು ಗೊತ್ತಾ?!

ನೋಟು ಅಮಾನ್ಯ
ನವದೆಹಲಿ: ಪ್ರಧಾನಿ ಮೋದಿ ರಾತ್ರೋ ರಾತ್ರಿ 500 ಮತ್ತು 1000 ರೂ. ನೋಟು  ಅಮಾನ್ಯಗೊಳಿಸಿ ಆದೇಶಿಸಿದ ಬಳಿಕ ಜನರ ಬಳಿಯಿದ್ದ ಈ ನೋಟುಗಳೆಲ್ಲಾ ಏನಾದವು ಗೊತ್ತಾ?

ನೋಟು ಅಮಾನ್ಯಗೊಂಡ ಬಳಿಕ ಜನರು ತಮ್ಮ ಬಳಿಯಿದ್ದ ಅಮಾನ್ಯಗೊಂಡ ನೋಟುಗಳನ್ನು ಬ್ಯಾಂಕ್ ಗಳ ಮೂಲಕ ಬದಲಿ ಪಡೆದುಕೊಳ್ಳಬೇಕಿತ್ತು. ಅದರಂತೆ ಸರ್ಕಾರ ಈ ಕಾರ್ಯದಲ್ಲಿ ಯಶಸ್ವಿಯಾಗಿದೆಯೇ? ಈ ಪ್ರಶ್ನೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರಿಸಿದೆ.

ಆರ್ ಬಿಐ ಪ್ರಕಾರ ಅಮಾನ್ಯಗೊಂಡ ನೋಟುಗಳ ಪೈಕಿ ಶೇ. 99.3 ನೋಟುಗಳು ಮರಳಿ ಬ್ಯಾಂಕ್ ಗೆ ಪಾವತಿಯಾಗಿದೆಯಂತೆ. ನೋಟು ಅಮಾನ್ಯಗೊಳಿಸುವ ಆದೇಶ ನೀಡಿದಾಗ ಇಂತಹ ನಿಷೇಧಿತ ನೋಟುಗಳು 15.41 ಲಕ್ಷ ಕೋಟಿ ರೂ. ಚಲಾವಣೆಯಾಗಿದ್ದವು. ಅವುಗಳ ಪೈಕಿ ಇದೀಗ 15.31 ಲಕ್ಷ ಕೋಟಿ ರೂ. ಮರಳಿವೆ. ಕೇವಲ 10,720 ಕೋಟಿ ಹಣ ಮರಳಿ ಬಂದಿಲ್ಲ. ಹಾಗಿದ್ದರೂ ಬಹುಪಾಲು ಹಣವನ್ನು ಮರಳಿ ಪಡೆಯಲಾಗಿದೆ ಎಂದು ಆರ್ ಬಿಐ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೈಲಾಸ ಯಾತ್ರೆಗೆ ಹೊರಟ ರಾಹುಲ್ ಗಾಂಧಿ