ಕುರುಡು ಕಾಂಚನಾ, ಎಲೆಕ್ಷನ್ ಗಿಫ್ಟ್ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣು..!

Webdunia
ಶುಕ್ರವಾರ, 7 ಏಪ್ರಿಲ್ 2023 (20:20 IST)
ಚುನಾವಣೆ ವೇಳೆ ನಡೆಯುವ ಆಕ್ರಮಗಳ ವಿರುದ್ಧ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ನಿಮಗ್ಯಾರಾದ್ರು ಆಮಿಷ ಒಡ್ಡಿದ್ರೆ ಅಥವಾ ನಿಮ್ಮ ಕಣ್ಮುಂದೆ ಯಾವುದಾದರು ಆಕ್ರಮಗಳು ಕಂಡರೆ, ನೀವೇ ಖುದ್ದು ದೂರು ದಾಖಲಿಸಬಹುದು. ಮತದಾನ ದಿನ ಹತ್ತಿರ ವಾಗುತ್ತಿದ್ದಂತೆ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರೀತಿ ಕಸರತ್ತನ್ನ ಮಾಡೋದು ಕಾಮನ್. ಅದರಂತೆ ಈಗಾಗಲೇ ಅನೇಕ ಕಡೆ ಜನರಿಗೆ ಗಿಫ್ಟ್ ರೂಪದಲ್ಲಿ ಅಮಿಷ ಒಡ್ಡಿ ತಗಲಾಕಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ಚುನಾವಣೆ ಆಯೋಗದ ಜೊತೆ ಬಿಬಿಎಂಪಿ ಕೂಡ ಹೆಜ್ಜೆ ಇಟ್ಟಿದೆ.

ಬೆಂಗಳೂರಿನಲ್ಲಿ ಚುನಾವಣೆ ಆಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿಸ್ಟ್ರಿಕ್ಟ್ ಕಂಪ್ಲೇಂಟ್ ಮಾನಿಟರಿಂಗ್ ಸೆಲ್ ಸ್ಥಾಪನೆ ಮಾಡಿದೆ. ಬೆಂಗಳೂರು ನಗರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಚುನಾವಣಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ  ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ, ಇತರೆ ಎಲೆಕ್ಟ್ರೋಲ್ ಅಫೆನ್ಸ್ಗಳಿಗೆ ಸಂಬಂಧಿಸಿದಂತೆ ಆಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರೇ ನೇರವಾಗಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಟೋಲ್ ಫ್ರೀ ನಂಬರ್ 1950 ಕ್ಕೆ ಕರೆ ಮಾಡಿ ದೂರು ನೀಡಬಹುದು. ಇನ್ನೂ, ಇದರ ಮಾನಿಟರಿಂಗ್ ಬಿಬಿಎಂಪಿ ಕೇಂದ್ರ ಕಛೇರಿಯಿಂದಲೇ ಮಾಡಲಾಗುತ್ತೆ. ಇಲ್ಲಿ 24/7 ತಂಡವೊಂದು ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ.

ಇನ್ನೂ, ನಿಮಗೆ ಕರೆ ಮಾಡೋಕೆ ಆಗದಿದ್ರೆ ಇರೋ ಜಾಗದಿಂದಲೇ ಆ್ಯಪ್ ಮೂಲಕವು ದೂರು ದಾಖಲು ಮಾಡಬಹುದು. National Grievances Redressal System (NGRS)ಮತ್ತು  cVIGIL ಎಂಬ ಆ್ಯಪ್ ಗಳ ಮೂಲಕವು ನೇರವಾಗಿ ನಿಮ್ಮ ಜಾಗದಲ್ಲಿ ನಡೆಯುತ್ತಿರುವ ಆಕ್ರಮಗಳನ್ನ ಪೋಟೋ, ವಿಡಿಯೋ ಮತ್ತು ಆಡಿಯೋ ಸಮೇತ ಚುನಾವಣೆ ಆಯೋಗಕ್ಕೆ ದೂರು ನೀಡಬಹುದು.ದೂರು ನೀಡುವರ ಮಾಹಿತಿಯನ್ನೂ ಗೌಪ್ಯವಾಗಿ ಇಡಲಾಗುತ್ತೆ, ಅಂತ ತಿಳಿಸಿದ್ರು,
ಚುನಾವಣೆ ಆಕ್ರಮಗಳ ಕಡಿವಾಣಕ್ಕೆ ಚುನಾವಣೆ ಆಯೋಗ ಶತಪ್ರಯತ್ನ ಮಾಡ್ತಿದರೆ, ಇತ್ತ ಪಕ್ಷಗಳು ಕೂಡ ಅಯೋಗಕ್ಕೆ ಚೆಳ್ಳೆ ಹಣ್ಣು ತ್ತಿನಿಸೀಕ್ಕೆ ಪ್ಲಾನ್ ಮಾಡ್ತಿವೇ,  ಆದ್ರೆ ಸಾರ್ವಜನಿಕರು ಅಯೋಗದ ಜೊತೆ ಕೈಜೊಡಿಸುದ್ರೆ, ಈ ಅಕ್ರಮಗಳನ್ನೂ ತಡೆಯಬಹುದು,

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ತಗ್ಗಿದ ಸೈಕ್ಲೋನ್‌ ಎಫೆಕ್ಟ್‌, ಹಲವು ಜಿಲ್ಲೆಗಳಲ್ಲಿ ಒಣ ಹವೆ

Andhrapradesh Temple Stampede: ಈ ಅಂಶಗಳು ಶ್ರೀಕಾಕುಳಂ ಕಾಲ್ತುಳಿತಕ್ಕೆ ಕಾರಣವಾಯಿತೇ

ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಗಾದಿ ಕುರಿತು ಸಿದ್ದು ಆಪ್ತ ಭೈರತಿ ಸುರೇಶ್ ಸ್ಫೋಟಕ ಹೇಳಿಕೆ

ಶ್ರೀಕಾಕುಳಂ ಕಾಲ್ತುಳಿತ ಶಾಕಿಂಗ್ ದುರ್ಘಟನೆ: ಕೆ ಕವಿತಾ

ನನ್ನ ಮಾತು ಕೇಳ್ತಿದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರ್ಲಿಲ್ಲ: ಜಮೀರ್‌ ಅಹಮದ್ ಖಾನ್

ಮುಂದಿನ ಸುದ್ದಿ
Show comments