Webdunia - Bharat's app for daily news and videos

Install App

40 ಕೆಜಿ ತೂಕದ ಕಿರೀಟ ಹೊತ್ತು ಸಾಗಿದ ಅರ್ಚಕ ವಿ .ಜ್ಞಾನೇಂದ್ರ

Webdunia
ಶುಕ್ರವಾರ, 7 ಏಪ್ರಿಲ್ 2023 (19:58 IST)
ಕಳೆದ ಮದ್ಯರಾತ್ರಿ 12 ಕ್ಕೆ ವಿಶ್ವವಿಖ್ಯಾತಿ ಕರಗ ಮಹೋತ್ಸವ ನಡೆದಿದ್ದು, ಗೋವಿಂದಾ.. ಗೋವಿಂದ ..ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದ್ರು.ಝಗಮಗಿಸುವ ದೀಪಾಲಂಕಾರ, ದೇವಾಲಯಕ್ಕೆ ವಿಶೇಷ ಅಲಂಕಾರ, ಪಾಂಡವರಿಗೆ ಹೂವಿನ ಹಾರ... ಇದರ ಮಧ್ಯೆ ಸಾವಿರಾರು ವೀರಕುಮಾರರು ಕೈಯಲ್ಲಿ ಕತ್ತಿ, ಗೋವಿಂದ... ಗೋವಿಂದ.. ಎಂಬ ಜಪ....ತಿಗರಳಪೇಟೆ, ನಗರ್ತರಪೇಟೆ, ಕಬ್ಬನ್ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯ ರಸ್ತೆ ಹಾಗೂ ಗಲ್ಲಿಗಲ್ಲಿಯೂ ಹಸಿರು ತೋರಣ ಚೈತ್ರ ಪೌರ್ಣಿಮೆಯ ಬೆಳಕಿನಲ್ಲಿ ಪ್ರತಿ ಮನೆಯ ಮುಂದೆ ನೀರು ಹಾಕಿ, ಸಾರಿಸಿ, ರಂಗೋಲಿ ಹಾಕುವ ಸಡಗರ. ಇದೆಲ್ಲಾ ಬೆಂಗಳೂರು ಪ್ರಸಿದ್ಧ ಕರಗ ಶಕ್ತ್ಯೋತ್ಸವ ಸಂಭ್ರಮದ ನೋಟ.

ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಅಂಗವಾಗಿ ನಗರದ ಪೇಟೆ ಬೀದಿಗಳಲ್ಲಿ ಮಾರ್ಚ್ 29ರಿಂದಲೇ ಸಿದ್ಧತೆ ನಡೆದಿತ್ತು. ಗುರುವಾರ ಪೌರ್ಣಿಮೆಯಂದು ಹೂವಿನ ಕರಗದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಈ ಪ್ರದೇಶಗಳಲ್ಲಿ ಸಂಭ್ರಮವಿತ್ತು. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಹಸಿ ಕರಗದ ಪೂಜೆ ಸೇರಿದಂತೆ ವಿವಿಧ ರೀತಿಯ ಪೂಜೆಗಳು ನಡೆದವು. ಅರ್ಚಕ ಜ್ಞಾನೇಂದ್ರ ವಿಶೇಷ ಪೂಜೆಗಳನ್ನು ಸಲ್ಲಿಸಿ ,ಧರ್ಮರಾಯಸ್ವಾಮಿ ದೇವಸ್ಥಾನ ಹೊರಭಾಗದಲ್ಲಿ ಕರ್ಪೂರ ಸೇವೆ ನಡೆಯಿತು. ವರ್ಷಗಳಿಂದ ಹೊತ್ತಿದ್ದ ಹರಕೆ ತೀರಿಸಲು ಸಣ್ಣ ಕರ್ಪೂರಗಳು ಸೇರಿದಂತೆ ಬೃಹತ್ ಗಾತ್ರದ ಕರ್ಪೂರಗಳ ಆರತಿ ಮಾಡಿದರು. ಕರಗದ ಮುಂದೆ ಸಾಗುವ ಎಲ್ಲ ವಯೋಮಾನದ ವೀರಕುಮಾರರು, ಸಂಜೆಯಿಂದಲೇ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದು ಸೇರಿದ್ದರು. 

ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ತೇರುಗಳು ಧರ್ಮರಾಯ ಸ್ವಾಮಿ ಮಹಾರಥೋತ್ಸವ ಹಿಂದೆ ಸಾಗಲು ಜೆ.ಸಿ.ರಸ್ತೆ, ಟೌನ್ ಹಾನ್ಗಳಲ್ಲಿ ನಿಂತಿದ್ದವು.ಝಗಮಗಿಸುವ ಬೆಳಕು, ಓಲಗದ ಸದ್ದು ಇಡೀ ಪೇಟೆಯನ್ನೇ ಆವರಿಸಿಕೊಂಡಿತ್ತು. ತಡರಾತ್ರಿ ಮಲ್ಲಿಗೆಯ ಪರಿಮಳ ಹರಡುತ್ತ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗದ ಮೆರವಣಿಗೆ ಹೊರಟಿತು. ಕರಗ ಹೊರ ಬಂದ ಕೂಡಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಏಳು ಸುತ್ತಿನ ಕೋಟೆಯಂತೆ ಒಂದರೊಳಗೊಂದು ಪೇಟೆಗಳು ಬೆರೆತು ಕಿಷ್ಕಿಂಧೆಯಂತೆ ಇರುವ ಈ ಪ್ರದೇಶದ ಪ್ರತಿ ಗಲ್ಲಿಯಲ್ಲೂ ಜನಸಾಗರ ತುಂಬಿ ತುಳುಕುತ್ತಿತ್ತು.ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಂತೆ ತಿಗಳ ಸಮುದಾಯ ಅರ್ಚಕ ವಿ .ಜ್ಞಾನೇಂದ್ರ ಕರಗವನ್ನು ಹೊತ್ತು ಹೆಜ್ಜೆ ಹಾಕಿದ್ರು , ವಿಷೇಶ ಏನಂದ್ರೆ ಮಲ್ಲಿಗೆ ಹೋಗಳಿಂದ ಅಲಂಕರಿಸಿದ ಸುಮಾರು 40 ಕೆ ಜಿ ತೂಕದ ಕಿರೀಟವನ್ನು ತಲೆಯ ಮೇಲೆ ಹೊತ್ತು ನಗರದ ವಿವಿದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು, ಇದಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

 ಇನ್ನು  ಈ ಕರಗ  ಮಹೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.
ತಿಗಳರಪೇಟೆ ಸೇರಿ ಕರಗ ಸಾಗುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ದೇವಸ್ಥಾನಗಳನ್ನು ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.ಪ್ರಸಾದ ವಿನಿಯೋಗ: ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಸುತ್ತಮುತ್ತ ಹಾಗೂ ಕರಗ ಸಾಗುವ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಪುಲಾವ್, ಬಿಸಿ ಬೇಳೆ ಬಾತ್ ಸೇರಿ ವಿವಿಧ ರೀತಿಯ ಪ್ರಸಾದ ವಿತರಿಸಲಾಯಿತು. ಕರಗ ನೋಡಲು ಬಂದ ಭಕ್ತರಿಗೆ ಪಾನಕ, ಮಜ್ಜಿಗೆಯನ್ನೂ ನೀಡಲಾಯಿತು.  ಬೆಂಗಳೂರು ವಿಶ್ವವಿಖ್ಯಾತಿ ಕರಗಕ್ಕೆ ಬೆಂಗಳೂರಿಗೆ ಬೆಂಗಳೂರೇ ಕರಗಕ್ಕೆ ಸಾಕ್ಷಿಯಾಗಿತ್ತು,, ಲಕ್ಷಾಂತರ ಜನರು ಈ ಕರಗ ಮಹೋತ್ಸವ ನೋಡಿ ಕಣ್ತುಂಬಿಕೊಂಡ್ರು 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments