Publish Date: Mon, 23 Aug 2021 (15:54 IST)
Updated Date: Mon, 23 Aug 2021 (15:56 IST)
ಫುಡ್ ಪ್ರಾಡೆಕ್ಟ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸಜೀವದಹನಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿ
ರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಅಂಜನ್ ಟಾಕೀಸ್ ಬಳಿ ಮಂಗಳವಾರ ಮಧ್ಯಾಹ್ನ ಈ ದುರ್ಘಟನೆ ಸಂಭಣವಿಸಿದ್ದು, ಕಾರ್ಖಾನೆ ಮಾಲೀಕ ಸಚಿನ್ ಹಾಗೂ ಮೂವರು ಮಹಿಳೆಯರಿಗೆ ಗಾಯವಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರ ಮೂಲದ ಮನೀಶ್, ಸೌರಭ್ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಧನಲಕ್ಷ್ಮೀ, ಶಾಂತಿ ಎಂಬುವವರಿಗೂ ಗಾಯಗಳಾಗಿವೆ.
ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳ ದೌಡಾಯಿಸಿದ್ದು, ಸ್ಥಳಕ್ಕೆ ಮಾಗಡಿ ಪೊಲೀಸ್ ಠಾಣೆ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.