Select Your Language

Notifications

webdunia
webdunia
webdunia
webdunia

ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್...!

ಸಹಕಾರಿ ಸಚಿವ
ಸಹಕಾರಿ ಸಚಿವ ಎಸ್.ಟಿ.ಸೋಮ ಪುತ್ರ ನಿಶಾಂತ್ ಸೋಮಶೇಖರ್ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಚಂದ್ರಶೇಖರ್ ಸ್ವಾಮೀಜಿ ಎಂಬ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಎಂಬ ಪ್ರಮುಖ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಸಿಸಿಬಿ ಪೊಲೀಸರು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿಯನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಪುತ್ರನ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಶಾಸಕರ ಪುತ್ರಿಯೋರ್ವರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಶಾಸಕರ ಹಾಗೂ ಇನ್ನೋರ್ವ ಆರೋಪಿಗಾಗಿ ಆರೋಪಿಯನ್ನು ಪತ್ತೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಸಚಿವ ಎಸ್.ಟಿ.ಸೋಮಶೇಖರ್ ಅವರ ಪುತ್ರ ನಿಶಾಂತ್ ಗೆ ವಾಟ್ಸಪ್ ಮೂಲಕ ವಿಡಿಯೋ ಕಳುಹಿಸಿದ ಆರೋಪಿಗಳು ಯುವತಿ ಸಚಿವರ ಪುತ್ರ ಇರುವ ರೀತಿಯಲ್ಲಿ ಫೋಟೋ ಎಡಿಟ್ ಮಾಡಿ ಅಶ್ಲೀಲ ವಿಡಿಯೋವನ್ನು ಕಳುಹಿಸಿದ್ದರು. 1 ಕೋಟಿ ರೂಪಾಯಿ ಹಣ ನೀಡದಿದ್ದರೆ ವಿಡಿಯೋ ಬಹಿರಂಗ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿತ್ತು. ಈ ಕುರಿತು ನಿಶಾಂತ್ ಸೋಮಶೇಖರ್ ಸೈಬರ್ ಕ್ರೈಂ ಗೆ ದೂರು ನೀಡಿದ್ದರಲ್ಲದೇ ತಮ್ಮ ಹಾಗೂ ತಮ್ಮ ತಂದೆಯ ತೇಜೋವಧೆಗಾಗಿ ಇಂತಹ ವಿಡಿಯೋ ಎಡಿಟ್ ಮಾಡಿ ಕಳುಹಿಸಿ ಬೆದರಿಕೆಯೊಡ್ಡುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ದುಬೈನಿಂದ ವಾಪಸ್ ಆಗುತ್ತಿದ್ದ ಆರೋಪಿ ರಾಹುಲ್ ಭಟ್ ಹಾಗೂ ಸಚಿವರ ಬಳಿಯೇ ಈ ಹಿಂದೆ ಕೆಲಸ ಮಾಡುತ್ತಿದ್ದ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರೇ ಇಲ್ಲದ' ದಾಲ್‌ ಸರೋವರಕ್ಕೆ ಕೈಬೀಸಿದ ಪ್ರಧಾನಿ ಮೋದಿ: ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ