Select Your Language

Notifications

webdunia
webdunia
webdunia
Sunday, 13 April 2025
webdunia

ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ದ್ರಾವಿಡ್ ಸಿಟ್ಟು!

ರಾಹುಲ್ ದ್ರಾವಿಡ್
ಜೊಹಾನ್ಸ್ ಬರ್ಗ್ , ಭಾನುವಾರ, 9 ಜನವರಿ 2022 (09:23 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗರ ಆಟ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನಕ್ಕೆ ಕಾರಣವಾಗಿದೆ.

ಪಂದ್ಯವೆಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಆದರೆ ದ್ರಾವಿಡ್ ಗೆ ಕೋಪ ತರಿಸಿರುವುದು ತಂಡದ ಬ್ಯಾಟಿಂಗ್. ಎಲ್ಲಾ ಕಳೆದ ಎರಡೂ ಪಂದ್ಯಗಳಲ್ಲಿ ಒಂದಿಬ್ಬರನ್ನು ಬಿಟ್ಟರೆ ಬ್ಯಾಟಿಂಗ್ ನಲ್ಲಿ ಯಾರೂ ಮಿಂಚಿಲ್ಲ. ಕಳಪೆ ಶಾಟ್ ಸೆಲೆಕ್ಷನ್ ನಿಂದ ಔಟಾಗುತ್ತಿರುವುದು ದ್ರಾವಿಡ್ ಸಿಟ್ಟು ಹೆಚ್ಚಿಸಿದೆ.

ಕೆಲವು ಆಟಗಾರರು ಉತ್ತಮ ಆರಂಭ ತೋರಿದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿಲ್ಲ. ನಿಂತು ಆಡುವ ಛಾತಿಯನ್ನೇ ಯಾರೂ ತೋರಿಲ್ಲ. ಇದು ದ್ರಾವಿಡ್ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಮೊದಲು ಅಟಗಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕತ್ವ ವಿಚಾರದಲ್ಲಿ ಕೆಎಲ್ ರಾಹುಲ್ ಗೆ ಮತ್ತೆ ಅದೃಷ್ಟ ಕೈಕೊಡುತ್ತಿರುವುದೇಕೆ?