Select Your Language

Notifications

webdunia
webdunia
webdunia
webdunia

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ- ವಿಜಯೇಂದ್ರ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ- ವಿಜಯೇಂದ್ರ
bangalore , ಸೋಮವಾರ, 17 ಜುಲೈ 2023 (19:51 IST)
ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲಾ ವಿಪಕ್ಷಗಳು ಒಗ್ಗೂಡಿ ಸಭೆ ಮಾಡ್ತಿವೆ.ದೇಶದ ವಿಪಕ್ಷಗಳ ಕಥೆ ಹೇಗಾಗಿದೆ ಅಂದ್ರೆ ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಅಂತ ಪರಿಸ್ಥಿತಿ ವಿಪಕ್ಷಗಳಿಗೆ ಆಗಿದೆ.ಮೋದಿಜಿ ನಾಯಕತ್ವ ಜಗತ್ತು ಕೊಂಡಾಡುವಾಗ 20ಕ್ಕೂ ಹೆಚ್ಚು ರಾಷ್ಟ್ರಗಳು ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿದೆ.ದೇಶದ ವಿಪಕ್ಷಗಳಿಗೆ ದೇಶ ಕಟ್ಟುವ ಚಿಂತನೆ ಇಲ್ಲ ಎಂದು ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
 
ಹೇಗಾದ್ರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು,ಮತ್ತೆ ಮೋದಿ ಪ್ರಧಾನಿ ಆಗಬಾರದು ಅನ್ನೋ ಒನ್ ಲೈನ್ ಅಜೆಂಡಾ ಇವರದ್ದು.ಅವರಿಗೆ ಶುಭವಾಗಲಿ, ನಿವೇನೇ ಮಾಡಿದ್ರು ಜನ ಇದ್ದಾರೆ.2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.ಮೂರನೇ ಬಾರಿ ಮೋದಿ ಪ್ರಧಾನಿ ಆಗೋದನ್ನ ತಡೆಯಲು ಸಾಧ್ಯವಿಲ್ಲ.
 
ಇನ್ನೂ ಈ ವೇಳೆ ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು ನನಗೂ ಆ ವಿಚಾರ ಗೊತ್ತಿಲ್ಲ.ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ‌.ನಾನು ಮೊದಲ ಬಾರಿ ಶಾಸಕ.ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ.ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದ್ರು ಅಲ್ಲದೇ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ವಿಚಾರವಾಗಿರಾಜ್ಯಾಧ್ಯಕ್ಷ ಸ್ಥಾನ ಕೊಡಲಿ ನನ್ನ ಬೆಂಬಲವೂ ಇದೆ ಎಂದು ವಿಜಯೇಂದ್ರ ಹೇಳಿದ್ದಾರೆ.
 
ಮಳೆ ಕೊರತೆ, ರೈತರ ಆತ್ಮಹತ್ಯೆಯ ವಿಚಾರವಾಗಿ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡ್ತೀವಿ.ಸದನದಲ್ಲಿ ಇದು ಚರ್ಚೆಯಾಗಬೇಕು.ಮಳೆ‌ಮುಂದುವರೆದು ಹೋಗ್ತಿದೆ.ರೈತರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡಬೇಕು.ಆಡಳಿತ ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಜಯೇಂದ್ರ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದೆ ಬಿಜೆಪಿಯವರು- ಸಿಎಂ