Select Your Language

Notifications

webdunia
webdunia
webdunia
webdunia

ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದೆ ಬಿಜೆಪಿಯವರು- ಸಿಎಂ

ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದೆ ಬಿಜೆಪಿಯವರು- ಸಿಎಂ
bangalore , ಸೋಮವಾರ, 17 ಜುಲೈ 2023 (19:30 IST)
ವಿಧಾನಸೌದದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇದು ಎರಡನೇ ಸಭೆ ನಡೆಯುತ್ತಿದೆ.ಸುಮಾರು 24 ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗ್ತಿದ್ದಾರೆ.ಎಲ್ಲಾ ವಿಪಕ್ಷ ಲೀಡರ್ ಕೂಡ ಭಾಗಿಯಾಗ್ತಿದ್ದಾರೆ.ಇಂದು ಮತ್ತು ನಾಳೆ ಎರಡು ದಿನ ಚರ್ಚೆ ನಡೆಯಲಿದೆ.ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟುಗೂಡಿ.ಚುನಾವಣೆ ನಡೆಸಬೇಕು ಅನ್ನೋದು ಅಜೆಂಡಾ ಹಾಗಾಗಿ ಚರ್ಚೆ ನಡೆಯುತ್ತಿದೆ.ನಾಳೆ ಏನು ಚರ್ಚೆಯಾಗುತ್ತೆ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಕಾಂಗ್ರೆಸ್ ದೇಶದ ಆರ್ಥಿಕತೆ ಹಾಳು ಮಾಡಿದ್ರು ಅನ್ನೋ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದೆ ಬಿಜೆಪಿಯವರು.ನರೇಂದ್ರ ಮೋದಿ ಬಂದ ಮೇಲೆ ಬೆಲೆ ಏರಿಕೆಯಾಗಿದೆ,ಎಕಾನಮಿ ಹಾಳಾಗಿದೆ.ಜನರು ಬದುಕಲು ಸಾಧ್ಯವಾಗದ ರೀತಿಯಾಗಿದೆ.ಕೋಮುವಾದ ಘಟನೆಗಳು ಹೆಚ್ಚಾಗಿದೆ‌
 
ಬಿಜೆಪಿ ಮುಗಿಸಲು ಒಟ್ಟಾಗಿದ್ದಾರೆ ಅನ್ನೋ ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಸಮರ್ಥವಾಗಿ ಎದುರಿಸಲಿಲ್ವಾ.?ಮೋದಿಯವರು ಎಲ್ಲೆಲ್ಲಿ ವಿಧಾನಸಭೆ ಚುನಾವಣೆ ನಡೆಸಿದ್ರು.28 ಕಡೆ ಮೋದಿ ಹೋಗಿದ್ರು.ಹೋದ ಕಡೆಯಲ್ಲೆಲ್ಲಾ ನಾವು ಗೆದ್ದಿದ್ದೇವೆ,ಮೆಜಾರಿಟಿ ಗೆದ್ದಿದ್ದೇವೆ.ಈ ಬಾರಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಸೋಲಲಿವೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಪ್ರತಿಭಟನೆ