Select Your Language

Notifications

webdunia
webdunia
webdunia
webdunia

ಅಕ್ರಮವಾಗಿ ಮತಪಟ್ಟಿ ಪರಿಷ್ಕರಣೆ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಂದಾದ ಬಿಜೆಪಿ

BY Vijayendra-Yaduveer Odeyar
ಬೆಂಗಳೂರು: ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಇಂದು ಅಧಿಕೃತವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಂದಾಗಿದೆ.

ರಾಮನಗರ, ಜಯನಗರ ಸೇರಿದಂತೆ ಕೆಲವು ಕಡೆ ಟೆಂಟ್ ಹಾಕಿಕೊಂಡು ಬಿಎಲ್ ಒಗಳು ಎಂದು ಹೇಳಿಕೊಂಡು ಕೆಲವರು ಅಕ್ರಮವಾಗಿ ಮತಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದಾರೆ. ಮಸೀದಿಗಳ ಮುಂದೆ, ವಿಶೇಷವಾಗಿ ಮುಸ್ಲಿಮರ ಜನಸಂಖ್ಯೆ ಇರುವಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಮನೆ ಮನೆಗೆ ತೆರಳಿ ಎಸ್ಐಆರ್ ನಡೆಸಬೇಕು ಎಂದರೂ ಇಲ್ಲಿ ಅಧಿಕಾರಿಗಳು ಕಾಂಗ್ರೆಸ್ ಕುಮ್ಮಕ್ಕಿನಿಂದ ಅದನ್ನು ಗಾಳಿಗೆ ತೂರಿ ತಮಗೆ ಇಷ್ಟಬಂದ ಹಾಗೆ ಮಾಡುತ್ತಿವೆ ಎಂದು ಬಿಜೆಪಿ ಮತ್ತು ಜೆಡಿಎಸ್ ಗಂಭೀರ ಆರೋಪ ಮಾಡಿವೆ.

ಇದರ ಬೆನ್ನಲ್ಲೇ ಇಂದು ಬಿಜೆಪಿ ಘಟಕ ಮಧ್ಯಾಹ್ನ 2.15 ಗಂಟೆಗೆ ಈ ಅಕ್ರಮಗಳ ವಿರುದ್ಧ ಕೆ.ಆರ್. ಸರ್ಕಲ್ ಬಳಿ ಇರುವ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಲಿದ್ದಾರೆ.

ನಿನ್ನೆಯೇ ಈ ಸಂಬಂಧ ಬಿಜೆಪಿ ಕೆಲವು ಫೋಟೋ,  ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಮೊದಲು ಜೆಡಿಎಸ್ ನಾಯಕ, ಕೇಂದ್ರ ಸಚಿವ ಕುಮಾರಸ್ವಾಮಿ ಕೂಡಾ ಟೆಂಟ್ ಹಾಕಿಕೊಂಡು ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಫೋಟೋಗಳನ್ನು ಬಿಡುಗಡೆ ಮಾಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಮೆಟ್ರೋದಲ್ಲಿ ಸಾರ್ವಜನಿಕವಾಗಿಯೇ ಯುವ ಜೋಡಿಯ ರೊಮ್ಯಾನ್ಸ್: ನೆಟ್ಟಿಗರ ಆಕ್ರೋಶ Video