Select Your Language

Notifications

webdunia
webdunia
webdunia
webdunia

ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗ್ತಿರೋರು ಯಾರು ಎಂದ ಬಿಜೆಪಿ

Siddaramaiah-DK Shivakumar

Krishnaveni K

ಬೆಂಗಳೂರು , ಗುರುವಾರ, 3 ಜುಲೈ 2025 (16:19 IST)
ಬೆಂಗಳೂರು: ಸಿಎಂ ಆಗಬೇಕೆಂಬ ಕನಸು ಹೊತ್ತಿರುವ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗುತ್ತಿರುವವರು ಯಾರು ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.
 

ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರ ಮೂಲಕ 'ಸೆಪ್ಟೆಂಬರ್ ಬಳಿಕದ ಸಿಎಂ' ಎಂದು ಕುರ್ಚಿಗೆ ಎಷ್ಟೇ ಟವೆಲ್ ಹಾಕಿದರೂ, ಸಿದ್ದರಾಮಯ್ಯ ಬಣದ ತಂತ್ರದ ಮುಂದೆ ಬಂಡೆ ಜಾರಿ ಉರುಳಿದೆ. ಹೈಕಮಾಂಡ್ ಬೆಂಬಲ ಪಡೆದು ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಘೋಷಿಸಿದ್ದಾರೆ.

ಸಿದ್ದರಾಮಯ್ಯ ಅವರ ರಾಜಕೀಯ ಹೊಡೆತ ತಾಳಲಾರದೇ ಅಸಹಾಯಕತೆಯ ಮಾತನ್ನು ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಸಿದ್ದರಾಮಯ್ಯರನ್ನು ತಲೆಯಲ್ಲಿ ಹೊತ್ತು ತಿರುಗಾಡುತ್ತಿರುವ ಜಮೀರ್, ಮಹದೇವಪ್ಪ ಮುಂತಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಧೈರ್ಯವೂ ಡಿಕೆಶಿಗೆ ಬರುತ್ತಿಲ್ಲ.

ಒಟ್ಟಿನಲ್ಲಿ ಸಿಎಂ ಕುರ್ಚಿಯ ಸಲುವಾಗಿ ನಡೆಯುತ್ತಿರುವ ಕಾಂಗ್ರೆಸ್ ನಾಯಕರೊಳಗಿನ ಫೈಟ್‌ನಿಂದ ಸಚಿವರುಗಳು, ಶಾಸಕರು ಹಾದಿ ಬೀದಿಯಲ್ಲಿ ಕಿತ್ತಾಡುತ್ತಿದ್ದು ರಾಜ್ಯದ ಆಡಳಿತ ಮಾತ್ರ ಮೂರಾಬಟ್ಟೆಯಾಗಿದೆ ಎಂದು ಬಿಜೆಪಿ ವ್ಯಂಗ್ಯ ಮಾಡಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿವಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಂಡ ಬಾಳು ಬಿಟ್ಟು ರಾಜೀನಾಮೆ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ