ಬೆಂಗಳೂರು: ಕಾಂಗ್ರೆಸ್ ಗೆ ಆಜಾನ್ ಕೂಗುವ ಮೈಕ್ ಮುಟ್ಟುವ ತಾಕತ್ತಿಲ್ಲ. ಆದರೆ ಗಣೇಶೋತ್ಸವ ಕಾರ್ಯಕ್ರಮದ ಮೈಕ್ ಹೊತ್ತೊಯ್ದಿದೆ ಎಂದು ಬಿಜೆಪಿ ಟೀಕೆ ಮಾಡಿದೆ.
ರಾಜ್ಯದ ಕೆಲವೆಡೆ ಗಣೇಶೋತ್ಸವ ಕಾರ್ಯಕ್ರಮಕ್ಕೆ ನಿಯಮದ ಹೆಸರಿನಲ್ಲಿ ಪೊಲೀಸರು ಅಡ್ಡಿಪಡಿಸಿರುವ ಘಟನೆ ಗಳು ನಡೆದಿವೆ. ಈ ಘಟನೆಗಳನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ವಿಘ್ನ ವಿನಾಯಕನ ಕಾರ್ಯಕ್ರಮಕ್ಕೆ ಅಡ್ಡಿ ತಂದು ಧ್ವನಿ ವರ್ಧಕಗಳನ್ನು ಹೊತ್ತೊಯ್ದಿದೆ. ದಿನಕ್ಕೆ 5 ಬಾರಿ ಕೂಗುವ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಮುಟ್ಟುವ ತಾಕತ್ತು ಈ ಹಿಂದೂ ವಿರೋಧಿ ಸಿದ್ದರಾಮಯ್ಯನವರಿಗಿಲ್ಲ.
ಕಳೆದ ಬಾರಿ ಗಣೇಶನ ಮೂರ್ತಿಯನ್ನೇ ಬಂಧಿಸಿದ ಸರ್ಕಾರ, ಕೆರಗೋಡಿನಲ್ಲಿ ಭಗವಾಧ್ವಜ ಕಿತ್ತೆಸೆದಿದ್ದ ಸರ್ಕಾರ, ಮತ್ತೆ ಹಿಂದೂಗಳ ಮೇಲಿನ ಪ್ರಹಾರ ಮುಂದುವರೆಸಿದೆ ಎಂದು ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ. ಕೆಲವೆಡೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಾಗ ಮೈಕ್ ಕಿತ್ತುಕೊಂಡು ಹೋಗಿದ್ದರೆ ಮತ್ತೆ ಕೆಲವೆಡೆ ಮನರಂಜನಾ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಬಗ್ಗೆ ವರದಿಗಳಾಗಿವೆ.