Select Your Language

Notifications

webdunia
webdunia
webdunia
webdunia

ಜನರನ್ನ ಹೊಡೆಯೋದು ಬಿಜೆಪಿಯವರ ಉದ್ದೇಶ-ದಿನೇಶ್ ಗುಂಡೂರಾವ್

ಜನರನ್ನ ಹೊಡೆಯೋದು ಬಿಜೆಪಿಯವರ ಉದ್ದೇಶ-ದಿನೇಶ್ ಗುಂಡೂರಾವ್
bangalore , ಬುಧವಾರ, 6 ಸೆಪ್ಟಂಬರ್ 2023 (16:34 IST)
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು,ಉದಯನಿದಿ,ಪರಂ ಹೇಳಿಕೆ‌  ದಿನೇಶ್ ಗುಂಡೂರಾವ್ ಬೆಂಬಲಿಸಿದ್ದಾರೆ.
 
ಬಿಜೆಪಿಯವರಿಂದ ಅನಾವಶ್ಯಕ ಚರ್ಚೆಗಳು ನಡೆದಿವೆ.ಉರ್ದುವಿನಲ್ಲಿ ಹಿಂದೂಸ್ಥಾನ ಅಂತಾ ಹೇಳುತ್ತೇವೆ.ಇಂಡಿಯಾ , ಭಾರತ ಎಂದು ಕರೆಯುತ್ತೇವೆ.ವ್ಯರ್ಥ ಚರ್ಚೆಗಳಲ್ಲಿ ಹುಟ್ಟು ಹಾಕ್ತಿದ್ದಾರೆ.ಇಂಡಿಯಾ ಒಕ್ಕೂಟ ಮಾಡಿದ್ದೇವೆ.ಅದರ ವಿರುದ್ಧ ದ್ವೇಷ ಸಾಧಿಸಲು ಹೊರಟಿದ್ದಾರೆ.ಕ್ಷುಲ್ಲಕವಾಗಿ ನಡೆದುಕೊಳ್ಳುವುದು ಸರಿಯಲ್ಲ.ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ.ಅನೇಕ ರಾಜ್ಯಗಳಲ್ಲಿ ಬರಗಾಲ ಇದೆ.ಬೆಲೆ ಏರಿಕೆ, ನಿರುದ್ಯೋಗ ಇದೆ.ಬೇಜವಾಬ್ದಾರಿತನ, ನಿರರ್ಥಕ ವಿಚಾರ ಇದು.ಭಾರತ್, ಇಂಡಿಯಾ ಎಲ್ಲಾ ಒಂದೇ, ಸಂವಿಧಾನದಲ್ಲೇ ಈ ಬಗ್ಗೆ ಹೇಳಿದ್ದಾರೆ ಇಂಡಿಯಾ ವರ್ಸಸ್ ಭಾರತ್ ಅಂತಾ ಮಾಡ್ತಿದ್ದಾರೆ.ದೇಶ ಹೊಡೆಯೋದೇ ಇವ್ರ ಕೆಲಸ ಆಗಿದೆ.ದ್ವೇಷ ಬೆಳೆಸೋದು, ಸುಳ್ಳು ಹೇಳೋದು.ಸುಳ್ಳು ಸುದ್ದಿ ಪ್ರಚಾರ ಮಾಡೋದೇ ಅವ್ರ ಕೆಲಸ.ಕರ್ನಾಟಕ ರಿಸಲ್ಟ್ ನೋಡಿದ್ದಾರೆ.ದೇಶದ ವಿಪಕ್ಷಗಳೆಲ್ಲಾ ಒಂದಾಗಿ ನಿಂತ್ರೆ ಎನ್ ಡಿಎ ಗೆ ಸೋಲು ಖಚಿತ ಅದಕ್ಕೆ ಭಯ ಬಂದಿದೆ
 
ಮಾಧ್ಯಮ, ಇಡಿ, ಐಟಿ, ಎಲೆಕ್ಷನ್ ಕಮಿಷನ್  ಎಲ್ಲವೂ ಅಧೀನ.ಎಲ್ಲವೂ ಅವರ ಕೇಂದ್ರದ ಅಧೀನದಲ್ಲೇ ಇವೆ.ಏಕಚಕ್ರಾಧಿಪತ್ಯ ಆಗಿಬಿಟ್ಟಿದೆ.ಏನ್ ಬೇಕಾದ್ರೂ ಮಾಡ್ತೀವಿ ಅಂತಾರೆ.ಎಷ್ಟು ಹಿಂಸಾಚಾರ ಆದ್ರೂ ಪರವಾಗಿಲ್ಲ ಅಂತಾರೆ.ಚುನಾವಣೆಯಲ್ಲಿ ಸೋಲಾಗುತ್ತೆ ಅನ್ನೋ ಭಯ.ಇನ್ನೂ ಪ್ರಕಾಶ್ ರೈ, ಪರಮೇಶ್ವರ್ ಹೇಳಿಕೆ ವಿಚಾರವಾಗಿ ಅದು ಅವ್ರ ಅಭಿಪ್ರಾಯ,ಪ್ರಗತಿಪರರು ಇದ್ದಾರೆ.ಗಾಂಧೀಜಿಯನ್ನ ಗೌರವಿಸುವವರು ಇದ್ದಾರೆ.ಗೂಡ್ಸೆ ಪರ ಇರುವವರೂ ಇದ್ದಾರೆ.ಸನಾತನ ಧರ್ಮದಿಂದ ಜಾತಿ ಬಂತು ಅಂತಾ ಹೇಳ್ತಾರೆ.ಅದು ಅವ್ರ ಅಭಿಪ್ರಾಯ. ಇನ್ನೊಬ್ಬರದು ವಿರುದ್ಧದ ಅಭಿಪ್ರಾಯ ಇರಬಹುದು.ಪರಮೇಶ್ವರ್ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡಲ್ಲ.ಆದರೆ ಅಭಿಪ್ರಾಯ ಮುಖ್ಯ.ಗೌರಿ ಲಂಕೇಶ್ ಕೊಲೆ ಯಾಕೆ ಮಾಡಿದ್ರು.ಎಂಎಂ ಕಲ್ಬುರ್ಗಿ ಕೊಲೆ ಯಾಕಾಯ್ತು.ಸಹನೆ ಇಲ್ಲದವರು ಸಹಿಸಿಕೊಳ್ಳಲ್ಲ.ಜನರನ್ನ ಹೊಡೆಯೋದು ಬಿಜೆಪಿಯವರ ಉದ್ದೇಶ.ಸುಳ್ಳು ಹೇಳಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡ್ತಿದ್ದಾರೆ.ಅಸ್ಪೃಷ್ಯತೆ ವಿರುದ್ದ ಹೋರಾಟ ನಮ್ಮದು.ಜಾತಿ ವ್ಯವಸ್ಥೆ ಸನಾತನ ಧರ್ಮದಿಂದ ಬಂದಿದ್ದು ಅಂತಾರೆ.ಅವರವರ ಅಭಿಪ್ರಾಯಗಳಿಗೆ ಗೌರವ ಕೊಡಬೇಕು.ಹಿಂದೂ ಧರ್ಮದಲ್ಲಿ ಬೇಕಾದಷ್ಟು ವಿಚಾರಗಳಿವೆ.ಧರ್ಮ ಇದೆ, ಆರ್ಯ ಸಮಾಜ ಇದೆ.ಲಿಂಗಾಯತ ಧರ್ಮ ಇದೆ.ಎಲ್ಲಾರ ಅಭಿಪ್ರಾಯ ಸ್ವೀಕಾರ ಮಾಡಿ ಮುಂದೆ ಹೋಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದಯನಿಧಿ ಹೇಳಿಕೆ ವಿಚಾರಕ್ಕೆ ಮಮತಾ ಬೇಸರ..!