Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಬಿಡಲ್ಲ..ಬಿಜೆಪಿಗೆ ಹೋಗುವುದಕ್ಕೂ ತೊಂದರೆಯಿಲ್ಲ

ಕಾಂಗ್ರೆಸ್ ಬಿಡಲ್ಲ..ಬಿಜೆಪಿಗೆ ಹೋಗುವುದಕ್ಕೂ ತೊಂದರೆಯಿಲ್ಲ
ಧಾರವಾಡ , ಸೋಮವಾರ, 4 ಸೆಪ್ಟಂಬರ್ 2023 (16:43 IST)
ಸಚಿವರ ಕಾರ್ಯವೈಖರಿಗೆ ಬೇಸತ್ತು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಠಿಸಿತ್ತು.ಈ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಸದ್ಯ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರೋದು ನಿಜ. ಸೆಪ್ಟೆಂಬರ್ 5ರಂದು ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಈಗ ಇಡೀ ಜೆಸ್ಕಾಂ ಸಮಸ್ಯೆ ಪರಿಹಾರ ಆಗುತ್ತದೆ. ನನಗೆ ಕಾಂಗ್ರೆಸ್​ ಬಗ್ಗೆ ಕೋಪವಿಲ್ಲ, ಸಿಟ್ಟಾಗುವಂತಹದ್ದು ಏನೂ ಆಗಿಲ್ಲ. ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಆದ್ರೆ ಬಿಜೆಪಿಗೆ ಹೋಗಲು ನನಗೆ ತೊಂದರೆಯೂ ಇಲ್ಲ. ಇದಕ್ಕಾಗಿ ಎರಡ್ಮೂರು ಸಲ ಎಂ‌.ಬಿ. ಪಾಟೀಲರಿಗೆ ನೆನಪು ಮಾಡಿದ್ದೇನೆ, ಆದ್ರೆ ಪ್ರತಿಕ್ರಿಯೆ ಬಂದಿಲ್ಲ ಹೀಗಾಗಿ ಸಿಎಂಗೆ ಪತ್ರ ಬರೆಯಬೇಕಾಯ್ತು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ