Publish Date: Mon, 04 Sep 2023 (10:05 IST)
Updated Date: Mon, 04 Sep 2023 (10:07 IST)
ಹಾಸನ : ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿ ತಾಯಿಗೂ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ದುಡ್ಡು ಕೊಟ್ಟು ನಮಗೆ ಶಕ್ತಿ ಕೊಡು ಎಂದು ಕೇಳಿದ್ದಾರೆ. ಆ ಗ್ಯಾರಂಟಿ ಹೇಗೆ ನಡೆಯುತ್ತದೆ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ವ್ಯಂಗ್ಯವಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮೀ ಯೋಜನೆ ಎಷ್ಟು ದಿನ ನಡೆಯುತ್ತದೆ ಎಂದು ಈಗ ಹೇಳುವುದಿಲ್ಲ. ಮೂರ್ನಾಲ್ಕು ತಿಂಗಳು ಕಾಯೋಣ, ಆಮೇಲೆ ಹೇಗೆ ಮುಂದುವರೆಯುತ್ತದೆ ಎಂದು ನೋಡೋಣ ಎಂದು ಹೇಳಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಬಿಜೆಪಿಯವರು ಮಾಡಿರುವ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ದಿನಾ ತಮಟೆ ಹೊಡೆಯುತ್ತಿದ್ದಾರೆ. ಅವರನ್ನು ತನಿಖೆ ಮಾಡಬೇಡಿ ಎಂದು ಹಿಡಿದುಕೊಂಡಿರುವವರು ಯಾರು? ಬಿಟ್ ಕಾಯಿನ್ ಬಗ್ಗೆಯೂ ತನಿಖೆ ನಡೆಸಲಿ ಎಂದು ಗುಡುಗಿದರು.