Publish Date: Mon, 15 May 2023 (19:52 IST)
Updated Date: Mon, 15 May 2023 (18:29 IST)
ಶಿವಮೊಗ್ಗದಲ್ಲಿ ಬದಲಾವಣೆ ಬಯಸಿದ್ದೆವು.. ಆದರೆ ಬದಲಾವಣೆ ಬೇರೆ ರೀತಿಯಲ್ಲಿ ಬಂದಿದೆ. ಸೋಲು, ಗೆಲುವು ಎರಡನ್ನೂ ನಾನು ನೋಡಿದ್ದೇನೆ ಎಂದು ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಮ್ಮ ಭಾವನೆಗಳಿಗೆ ಮನ್ನಣೆ ಸಿಕ್ಕಿಲ್ಲ. ಶಿವಮೊಗ್ಗವನ್ನು ಶಾಂತಿಯುತವನ್ನಾಗಿಸಲು ನಾನು ಪ್ರಯತ್ನಿಸಿದ್ದೆ.. ಯಾವ ಕಾರಣದಿಂದ ನನಗೆ ಯಶಸ್ಸು ಸಿಕ್ಕಿಲ್ಲ ಎಂಬುದು ತಿಳಿದಿಲ್ಲ. ಆದರೆ ರಾಜಕೀಯವಾಗಿ ನಾನು ಗುರಿ ಮುಟ್ಟಿದ್ದೇನೆ ಎಂಬ ಸಾರ್ಥಕತೆ ಇದೆ ಎಂದಿದ್ದಾರೆ.. ಇನ್ನು ನಾನು ಬಿಜೆಪಿ ಬಿಟ್ಟಿದ್ದು ನನಗೆ ಬೇಸರವಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿಗೆ ಶಾಕ್ ಕೊಟ್ಟಿರುವುದು ನಮಗೆ ಸಮಾಧಾನ ತಂದಿದೆ. ಟಿವಿಯಲ್ಲಿ ಬರುವವರಿಗೆಲ್ಲಾ ಜನರು ಮನೆಗೆ ಕಳಿಸಿದ್ದಾರೆ. ಬೆಳಿಗ್ಗೆಯಾದರೆ ಸಾಕು ಕೆಲವರು ಟಿವಿಯಲ್ಲಿ ಬರ್ತಿದ್ರು. ಅಂತವರೆಲ್ಲರನ್ನೂ ಮತದಾರರು ಮನೆಗೆ ಕಳಿಸಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ರು.