Select Your Language

Notifications

webdunia
webdunia
webdunia
webdunia

ಟಿಪ್ಪು ಬದಲು ಮಿರ್ಜಾ ಇಸ್ಮಾಯಿಲ್ ಜಯಂತಿ ಮಾಡಲಿ: ಮಾಣಿಪ್ಪಾಡಿ

ಟಿಪ್ಪು ಬದಲು ಮಿರ್ಜಾ ಇಸ್ಮಾಯಿಲ್ ಜಯಂತಿ ಮಾಡಲಿ: ಮಾಣಿಪ್ಪಾಡಿ
ಬೆಂಗಳೂರು , ಸೋಮವಾರ, 6 ನವೆಂಬರ್ 2017 (12:23 IST)
ಬೆಂಗಳೂರು: ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ, ಆರೆಸ್ಸೆಸ್ ಹಾಗೂ ಸಂಘಪರಿವಾರದ ಕಾರ್ಯಕರ್ತರು ವೀರವನಿತೆ ಒನಕೆ ಓಬವ್ವ ಹೋರಾಟ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರಾದ ಅನ್ವರ್ ಮಾಣಿಪ್ಪಾಡಿ, ಚಿ.ನಾ.ರಾಮು ಸೇರಿ ಮುಂತಾದವರು ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅನ್ವರ್ ಮಾಣಿಪ್ಪಾಡಿ ಎಡವಟ್ಟು ಮಾಡಿದ್ದಾರೆ.

ಸರ್ಕಾರದಿಂದ ಮಿರ್ಜಾ ಇಸ್ಮಾಯಿಲ್ ಜನ್ಮ ದಿನಾಚರಣೆ ಮಾಡಲಿ. ಮಿರ್ಜಾ ಇಸ್ಮಾಯಿಲ್ ರನ್ನ ನಾವು ಸಹಿಸಿಕೊಳ್ತೇವೆ. ಆದ್ರೆ ಟಿಪ್ಪು ಜಯಂತಿ ಅಕ್ಷಮ್ಯ ಅಪರಾಧ. ಟಿಪ್ಪು ಒಬ್ಬ ಮತಾಂಧ, ಅವನು ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂಗಳನ್ನು ಮತಾಂತರ ಮಾಡಿದ. ಅದಕ್ಕಾಗಿ ನಾವು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಇಂದಿಗೂ ಮಡಿಕೇರಿ ಸುತ್ತಮುತ್ತ ಫರ್ನಾಂಡಿಸ್ ಹೆಸರಿನ ಜನರು ಸಿಗ್ತಾರೆ. ಅವರಿಗೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ, ಆದ್ರೂ ಕ್ರಿಶ್ಚಿಯನ್ನರಾಗಿದ್ದಾರೆ. ಟಿಪ್ಪು ವಿದೇಶದಿಂದ ಬಂದವನು. ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ‌ ಜಯಂತಿ ಆಚರಣೆ ಮಾಡಲು ಹೊರಟಿದೆ ಎಂದು ಮಾಧ್ಯಮಗಳಿಗೆ ಅನ್ವರ್ ಮಾಣಿಪ್ಪಾಡಿ ಗೊಂದಲದ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ರೇವಣ್ಣಗೆ ಟಿಕೆಟ್: ದೇವೇಗೌಡರ ಗ್ರೀನ್ ಸಿಗ್ನಲ್