Publish Date: Fri, 23 Mar 2018 (14:14 IST)
Updated Date: Fri, 23 Mar 2018 (15:46 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದಾರೆ. ಮಾರ್ಚ 26 ರಂದು ಅಮಿತ್ ಷಾ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾ. 26ರಂದು ಅಮಿತ್ ಷಾ ಅವರು ತೀರ್ಥಹಳ್ಳಿಯಲ್ಲಿ ಆಯೋಜಿಸಿರುವ ರೈತರ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಅಡಿಕೆ ಹಾನಿಕಾರಕ ಪದಾರ್ಥ ಎಂಬ ವಿಚಾರದ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಷಾ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಂದು ಬೆಳಗ್ಗೆ ಶಿವಮೊಗ್ಗ ನಗರದಲ್ಲಿ ರೋಡ್ ಷೋ ನಡೆಯಲಿದೆ. ಅಲ್ಲದೇ ಕುವೆಂಪು ರಂಗ ಮಂದಿರದಲ್ಲಿ ಕೃಷಿ ಕೈಗಾರಿಕೆ ವಾಣಿಜ್ಯದ ಬಗ್ಗೆ ಸಂವಾದ ಹಮ್ಮಿಕೊಳ್ಳಲಾಗಿದೆ. ಆ ಬಳಿಕ ಬೆಕ್ಕಿನ ಕಲ್ಮಠದಲ್ಲಿ ಎಲ್ಲಾ ಮಠಾಧೀಶರನ್ನು ಷಾ ಭೇಟಿಯಾಗಲಿದ್ದಾರೆ. ಮಾ. 27ರಂದು ದಾವಣಗೆರೆ ಜಿಲ್ಲೆಯಲ್ಲಿ ಅಮಿತ್ ಷಾ ಪ್ರವಾಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.