Webdunia - Bharat's app for daily news and videos

Install App

ಬಿಜೆಪಿಯಲ್ಲಿ ಭುಗಿಲೆದ್ದ ಪೈಪೋಟಿ ...!!!

Webdunia
ಶುಕ್ರವಾರ, 15 ಅಕ್ಟೋಬರ್ 2021 (16:04 IST)
ಬೆಂಗಳೂರು ನಗರ ಉಸ್ತುವಾರಿಗಾಗಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗಾಗಲೇ ಬೀದಿಗೆ ಬಂದಿದೆ. ಈಗ ಇದೇ ಉಸ್ತುವಾರಿ ಜಟಾಪಟಿ ಸಂಪುಟವನ್ನೇ ಹೋಳಾಗಿಸುವ ಸೂಚನೆ ನೀಡಿದೆ. ಏಕೆಂದರೆ, ಈಗಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಮತ್ತೊಬ್ಬ ಸಚಿವರು ತುಪ್ಪ ಸುರಿದಿದ್ದಾರೆ.
ಇದರ ಜೊತೆ ಬಿಜೆಪಿಯಲ್ಲಿ ಮೂಲ-ವಲಸಿಗ ಚರ್ಚೆಯೂ ಮತ್ತೆ ಮುನ್ನಲೆಗೆ ಬಂದಿದೆ.
ಹೌದು, ಕಳೆದೊಂದು ವಾರದಿಂದ ಬೆಂಗಳೂರು ನಗರ ಉಸ್ತುವಾರಿಗಾಗಿ ಸಚಿವರಾದ ವಿ. ಸೋಮಣ್ಣ ಮತ್ತು ಆರ್.ಅಶೋಕ್ ಮಧ್ಯೆ ವಾತಿನ ಯುದ್ಧ ಆರಂಭವಾಗಿತ್ತು. ಮಹಾನಗರದ ಪಟ್ಟವನ್ನ ನನಗೆ ನೀಡಿ ಎನ್ನವಂತೆ ವಿ.ಸೋಮಣ್ಣ ನೇರವಾಗಿ ಬೇಡಿಕ ಇಟ್ಟಿದ್ದರು. ಆದರೆ, ಆರ್. ಅಶೋಕ್ ನಾನೇನು ಬೆಂಗಳೂರು ಉಸ್ತುವಾರಿಗಾಗಿ ಕಾಯುತ್ತಿಲ್ಲ ಎನ್ನುತ್ತಲೇ ಸಿಎಂ ಬಳಿ ತನಗೆ ನೀಡುವಂತೆ ಮಸಲತ್ತು ನಡೆಸುತ್ತಿದ್ದರು.
ಬೆಂಗಳೂರು ನಗರದ ಮೇಲೆ ಆಧಿಪತ್ಯ ಸ್ಥಾಪಿಸಲು ಪೈಪೋಟಿ ನಡೆಯುತ್ತಿದೆ. ಹಿರಿಯ ಸದಸ್ಯ ಆಗಿರುವ ವಿ. ಸೋಮಣ್ಣ ಹಾಗೂ ಆರ್ ಅಶೋಕ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾದಿ ಬೀದಿ ರಂಪಾಟ ಕೂಡ ಮಾಡಿಕೊಂಡಿದ್ದಾರೆ. ಆರ್. ಅಶೋಕ್ ಬಗ್ಗೆ ನೇರ ವಾಗ್ದಾಳಿ ನಡೆಸಿರುವ ಸೋಮಣ್ಣ, ನಾನು ಸಚಿವನಾದಾಗ ಸಾಮ್ರಾಟ್ ಆರ್ ಅಶೋಕ್ ಇನ್ನೂ ಶಾಸಕನಾಗಿ ಇರಲಿಲ್ಲ. ಹಿರಿಯನಿದ್ದೇನೆ, ಬೆಂಗಳೂರು ಉಸ್ತುವಾರಿ ಕೊಟ್ಟರೆ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಹಿರಿಯ ಸಚಿವ ವಿ. ಸೋಮಣ್ಣರ ಹೇಳಿಕೆಗೆ ಸಾವಧಾನದಿಂದಲೇ ಉತ್ತರ ಕೊಟ್ಟಿರುವ ಆರ್. ಅಶೋಕ್, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ: ನಾರಾಯಣ ಮೂರ್ತಿ

Karnataka Rain Alert: ಮುಂದಿನ 7 ದಿನಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ

ಬಿಜೆಪಿ, ಜೆಡಿಎಸ್ ಬೆಂಗಳೂರಿನ ಪರಿಸರ ಹಾಳು ಮಾಡುತ್ತಿದೆ: ರಣದೀಪ್ ಸುರ್ಜೇವಾಲ

ಲಾಟರಿ ಸಿದ್ದರಾಮಯ್ಯರಿಂದ ವಿಶ್ವಾಸ ಕಳೆದುಕೊಂಡು ಹೈಕಮಾಂಡ್‌ ರಣದೀಪ್ ಆಡಳಿತ ಹೇರಿದೆ: ಆರ್‌ ಅಶೋಕ್ ವ್ಯಂಗ್ಯ

ಅಮರನಾಥನ ದರ್ಶನ ಪಡೆಯಲು ಪ್ರಯಾಣ ಬೆಳೆಸಿದ 6064 ಯಾತ್ರಿಕರು

ಮುಂದಿನ ಸುದ್ದಿ
Show comments