Select Your Language

Notifications

webdunia
webdunia
webdunia
webdunia

ಇಂದು ಬಿಜೆಪಿಯಿಂದ ರಾಷ್ಟ್ರಾದ್ಯಂತ ಸೇವಾ ಕಾರ್ಯ

ಇಂದು ಬಿಜೆಪಿಯಿಂದ ರಾಷ್ಟ್ರಾದ್ಯಂತ ಸೇವಾ ಕಾರ್ಯ
ನವದೆಹಲಿ , ಗುರುವಾರ, 7 ಅಕ್ಟೋಬರ್ 2021 (12:02 IST)
ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಜೀವನಕ್ಕೆ ಕಾಲಿರಿಸಿ ಇಂದಿಗೆ 20ವರ್ಷ ಆಗುತ್ತದೆ. ಅದರಲ್ಲೂ ಸರ್ಕಾರದ ಮುಖ್ಯ ಹುದ್ದೆಯಲ್ಲೇ ಅವರು 20ವರ್ಷಗಳಿಂದ ನಿರಂತರವಾಗಿ ಮುಂದುವರಿಯುತ್ತಿದ್ದಾರೆ.

ಪ್ರಧಾನಿ ಮೋದಿ 2001ರ ಅಕ್ಟೋಬರ್ 7ರಂದು ಗುಜರಾತ್ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 2001ರಿಂದ 2014ರವರೆಗೆ ಗುಜರಾತ್ನ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು, ಅಲ್ಲಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಎಂಪಿ ಸೀಟ್ನಿಂದ ಗೆದ್ದು ಪ್ರಧಾನಮಂತ್ರಿ ಹುದ್ದೆಗೆ ಏರಿದರು. ಇದೀಗ ಎರಡನೇ ಅವಧಿಗೆ ಮುಂದುವರಿಯುತ್ತಿದ್ದಾರೆ. ಈ ವಿಶೇಷ ಕಾರಣಕ್ಕಾಗಿ ಇಂದು ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಾರ್ವಜನಿಕ ಸೇವೆಯ 20ವರ್ಷಗಳಲ್ಲಿ 7 ವರ್ಷ ಪ್ರಧಾನಿ ಹುದ್ದೆ ನಿಭಾಯಿಸಿರುವ ನರೇಂದ್ರ ಮೋದಿ ಅವಧಿ ಇನ್ನೂ ಮೂರು ವರ್ಷ ಇದೆ. ಇಂದಿಗೆ ಸರಿಯಾಗಿ 20ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಹಾಗೇ, ನರೇಂದ್ರ ಮೋದಿಯವರು ಸಾರ್ವಜನಿಕರಿಗೆ ಕೊಟ್ಟ ಅತ್ಯುಪಯೋಗಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ.  ಪ್ರಧಾನಿ ಮೋದಿಯವರ ಬಹುಮುಖ್ಯ, ಮಹತ್ವಾಕಾಂಕ್ಷಿ ಯೋಜನೆಗಳಲ್ಲಾದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಇಂದು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸುವರು. ಅದರಲ್ಲೂ ಮುಖ್ಯವಾಗಿ ನದಿ ಶುದ್ಧೀಕರಣ ಕಾರ್ಯ ನಡೆಯಲಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದರ ಮೋದಿಯವರು ಸ್ವಚ್ಛ ಭಾರತ್ 2.0 ಮಿಷನ್ಗೆ ಚಾಲನೆ ನೀಡಿದ್ದರು. ಭಾರತದ ಪ್ರತಿ ನದಿಯೂ ಕೊಳಚೆ ನೀರಿನಿಂದ ಮುಕ್ತವಾಗಿ, ಜಲ ಸಂರಕ್ಷಣೆಯಾಗಬೇಕು. ಈ ಉದ್ದೇಶ ಇಟ್ಟುಕೊಂಡು ಸ್ವಚ್ಛ ಭಾರತ್ 2.0 ಉದ್ಘಾಟನೆಯಾಗಿದೆ ಎಂದಿದ್ದರು. ಅದರಂತೆ ಇಂದು ಎಲ್ಲೆಡೆ ನದಿಗಳ ಸ್ವಚ್ಛತೆ ನಡೆಯಲಿದೆ. ಹಾಗೇ, ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾಗೆ ನೀಲನಕ್ಷೆ ಸಲ್ಲಿಸಿದ ಸಿದ್ದರಾಮಯ್ಯ