ಸಿದ್ಧಾರ್ಥನಗರ : ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
'ಬಡ ವ್ಯಕ್ತಿಯಿಂದ ಅನೈತಿಕ ರೀತಿಯಲ್ಲಿ ಭೂಮಿಯನ್ನು ಕಸಿದುಕೊಂಡು ಭೂ ಮಾಫಿಯಾ ತಮ್ಮ ಕೋಟೆಯನ್ನು ನಿರ್ಮಿಸಿದರೆ, ಅದರ ಮೇಲೆ ಬುಲ್ಡೋಜರ್ಗಳನ್ನು ಚಲಾಯಿಸಲು ಸರ್ಕಾರ ಹಿಂಜರಿಯುವುದಿಲ್ಲ' ಎಂದು ₹ 524.07 ಕೋಟಿ ಮೌಲ್ಯದ 300 ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಳಿಸಿದರು.
ಹಿಂದಿನ ಸರ್ಕಾರಗಳ ಮೇಲೆ ದಾಳಿ ಮಾಡಿದ ಆದಿತ್ಯನಾಥ್, 'ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಭೂ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದ್ದವು. ಆದರೆ, ಬಿಜೆಪಿ ಸರ್ಕಾರವು ಭೂ ಮಾಫಿಯಾ ನಡೆಸುತ್ತಿದ್ದವರಿಂದ 64,000 ಹೆಕ್ಟೇರ್ ಭೂಮಿಯನ್ನು ಮುಕ್ತಗೊಳಿಸಿದೆ' ಎಂದು ಹೇಳಿದರು.