Select Your Language

Notifications

webdunia
webdunia
webdunia
webdunia

'ಶಾಲಾ ಮಕ್ಕಳಿಗೆ' ಗುಡ್ ನ್ಯೂಸ್

'ಶಾಲಾ ಮಕ್ಕಳಿಗೆ' ಗುಡ್ ನ್ಯೂಸ್
ಬೆಂಗಳೂರು , ಸೋಮವಾರ, 4 ಅಕ್ಟೋಬರ್ 2021 (09:09 IST)
ಬೆಂಗಳೂರು : ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಗೊಂಡಿದ್ದರೂ, ಬಿಸಿಯೂಟ ಯೋಜನೆ ಮಾತ್ರ ಪುನರಾರಂಭಗೊಂಡಿಲ್ಲ. ಶೇ.65ರಷ್ಟು ಮಕ್ಕಳ ಹಾಜರಾತಿಯೊಂದಿಗೆ 25 ರಿಂದ 30 ಲಕ್ಷ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿದರೂ ಬಿಸಿಯೂಟದ ಇಲ್ಲದ ಕಾರಣ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ.
Photo Courtesy: Google

ಈ ಹಿನ್ನಲೆಯಲ್ಲಿ ದಸರಾ ರಜೆಯ ಬಳಿಕ ಶಾಲೆಗಳಲ್ಲಿ ಬಿಸಿಯೂಟ ಪುನಾರಾರಂಭಗೊಳ್ಳೋದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಉಪ ನಿರ್ದೇಶಕರಿಗೆ ಪತ್ರ ಕೂಡ ಬರೆದಿದ್ದು, ಯಾವುದಾದರೂ ಸಲಹೆ, ಸೂಚನೆಗಳಿದ್ದರೇ ಇಂದಿನ ಒಳಗಾಗಿ ತಿಳಿಸುವಂತೆ ಕೋರಿಕೊಂಡಿದೆ.
ಅಂದಹಾಗೇ ಅಕ್ಟೋಬರ್ 10 ರಿಂದ 20ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಈ ರಜೆ ಮುಗಿದು ಶಾಲೆಗಳು ಆರಂಭವಾದ ನಂತ್ರ ಅಕ್ಟೋಬರ್ 21ರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೂ ಬಿಸಿಯೂಟ ಪುನರಾರಂಭಿಸುವ ಚಿಂತನೆ ನಡೆಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಗುಡ್ ನ್ಯೂಸ್ ನೀಡಲಿದೆ.
ಇನ್ನೂ ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸುಮಾರು 60 ಲಕ್ಷ ಮಕ್ಕಳು ಬಿಸಿಯೂಟ ಫಲಾನುಭವಿಗಳಾಗಿದ್ದಾರೆ. ಪ್ರಸ್ತುತ ಶಾಲೆ ಆರಂಭವಾಗಿರುವಂತ 6 ರಿಂದ 10ನೇ ತರಗತಿಗಳಿಗೆ ಶೇ.55ರಿಂದ 65ರಷ್ಟು ಮಕ್ಕಳು ಹಾಜರಾತಿಯೊಂದಿಗೆ 25 ರಿಂದ 30 ಲಕ್ಷ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಬಿಸಿಯೂಟ ಪುನಾರಾರಂಭಿಸಿದ್ರೇ.. ಇನ್ನಷ್ಟು ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಿಸಿಯೂಟವನ್ನು ಪುನರಾರಂಭಿಸಬೇಕು ಎನ್ನುವಂತ ಚಿಂತೆಯನ್ನು ಸರ್ಕಾರ ನಡೆಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಿಂದ ಅ.7ರಂದು ಸಂಭ್ರಮಾಚರಣೆ