Publish Date: Tue, 28 Nov 2023 (17:22 IST)
Updated Date: Tue, 28 Nov 2023 (17:27 IST)
ನನ್ನದು ಮತ್ತು ಬಿಜೆಪಿಯ ಸಂಬಂಧ ಮುಗಿದ ಅಧ್ಯಾಯ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯೊಂದಿಗೆ ನಮ್ಮ ಪಕ್ಷವನ್ನು ವಿಲೀನ ಮಾಡುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧೆ ಮಾಡ್ತೇವೆ.
ಪಕ್ಷ ಸಂಘಟನೆಯ ಬಳಿಕ ಎಷ್ಟು ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದನ್ನು ಫೆಬ್ರವರಿಯಲ್ಲಿ ಹೇಳುತ್ತೇವೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.