Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಎಂದ ಬಿಜೆಪಿ ಎಂಎಲ್ ಸಿ

ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಎಂದ ಬಿಜೆಪಿ ಎಂಎಲ್ ಸಿ
ಮೈಸೂರು , ಶುಕ್ರವಾರ, 12 ಫೆಬ್ರವರಿ 2021 (11:16 IST)
ಮೈಸೂರು : ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ . ಸಿದ್ದರಾಮಯ್ಯರದ್ದು ಟ್ರಂಪಾಯಣದ ಕಥೆ, ಸಿದ್ದು ಸೋಲು ಒಪ್ಪಿಕೊಳ್ಳಲ್ಲ, ಗೆಲ್ಲಲೂ ಆಗಲ್ಲ ಎಂದು ಸಿದ್ದರಾಮಯ್ಯ  ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಸೋತರೆ ರಾಹುಕೇತುಗಳು ಸೋಲಿಸಿದರು ಅಂತಾರೆ. ನನ್ನ ಬಿಟ್ಟು ಇನ್ಯಾರೂ ಇರಬಾರದು ಎಂಬ ಮನಸ್ಥಿತಿ. ಸಿದ್ದರಾಮಯ್ಯಗೆ ರಾಜಕೀಯ ಚಡಪಡಿಕೆ ಶುರುವಾಗಿದೆ.  ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಬಿಎಸ್ ವೈ ನೋಡಿದ್ರೆ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಸಿದ್ದುಗೆ ಸಿಎಂ ಪಟ್ಟಕ್ಕೇರುವ ಬಯಕೆ ಇದೆ. ಹೀಗಾಗಿ ನಾಯಕತ್ವದ ಬದಲಾವಣೆಯ ಬಗ್ಗೆ ಮಾತಾಡ್ತಾರೆ ಎಂದು ಸಿದ್ದರಾಮಯ್ಯ  ವಿರುದ್ಧ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ‘ಹಿಂದ’ ಹೋರಾಟ ವಿಚಾರ ಇದು ಯಾವ ಹಿಂದ ಹೋರಾಟವೂ ಅಲ್ಲ. ಇದು ಸಿದ್ದರಾಮಯ್ಯ , ಮಹದೇವಪ್ಪ ಸ್ವಾರ್ಥದ ಹೋರಾಟ. ಸಿದ್ದುಗೆ ಅಸ್ತಿತ್ವದ ಅಭದ್ರತೆ ಕಾಡುತ್ತಿದೆ. ಅಭದ್ರತೆ ಮುಚ್ಚಿಕೊಳ್ಳಲು ಹಿಂದ ಅಸ್ತ್ರಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ವಿಶ್ವನಾಥ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭಾ ವಿಪಕ್ಷ ನಾಯಕರಾಗಿ ಖರ್ಗೆ ಆಯ್ಕೆ