ಸಿದ್ದರಾಮಯ್ಯ ತಾರತಮ್ಯ ನೀತಿ ವಿರೋಧಿಸಿ ಬಿಜೆಪಿ ಸದಸ್ಯರಿಂದ ಇಂದು ಪ್ರತಿಭಟನೆ

ಮಂಗಳವಾರ, 25 ಜೂನ್ 2019 (10:25 IST)
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಾರತಮ್ಯ  ನೀತಿ ವಿರೋಧಿಸಿ  ಬಿಜೆಪಿ ಸದಸ್ಯರು  ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ.ಎಸ್ ಎಫ್ ಸಿ ಅನುದಾನದಲ್ಲಿ ಸಿದ್ದರಾಮಯ್ಯ ರಿಂದ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು  ಬಾದಾಮಿ ಪುರಸಭೆಯ ಬಿಜೆಪಿ ಸದಸ್ಯರು  ಪ್ರತಿಭಟನೆ ಮುಂದಾಗಿದ್ದು, ಬೆಳಿಗ್ಗೆ 11ಕ್ಕೆ ಪುರಸಭೆ ಕಚೇರಿಗೆ ಬೀಗ ಹಾಕಿ ಬಿಜೆಪಿ ಪ್ರತಿಭಟನೆ ನಡೆಸಲಿದ್ದಾರೆ.


ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಭಿವೃದ್ಧಿ, ಕಾಮಗಾರಿ ವಿಚಾರದಲ್ಲಿ ಕಾಂಗ್ರೆಸ್ಸ್ ಸದಸ್ಯರ ವಾರ್ಡ್ ಗೆ ಹೆಚ್ಚು ಮೀಸಲಾತಿ ನೀಡುತ್ತಿದ್ದಾರೆ. ಕಾಂಗ್ರೆಸ್ ನ 13 ವಾರ್ಡ್ ಗಳಿಗೆ ರಸ್ತೆ ಡಾಂಬರೀಕರಣ ಚರಂಡಿ ದುರಸ್ತಿ ಸೇರಿ ವಿವಿಧ ಕಾಮಗಾರಿಗಳಿಗೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ ಬಿಜೆಪಿ ಸದಸ್ಯರಿರುವ ವಾರ್ಡ್ ಗಳಿಗೆ ಕಾಮಗಾರಿ ಹಂಚಿಕೆ ಮರೀಚಿಕೆಯಾಗಿದೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ.  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಪಿಸಿಸಿ ನೂತನ ಸಮಿತಿ ರಚನೆ ವಿಚಾರದಲ್ಲಿ ಕೈ ನಾಯಕರಿಗೆ ಎದುರಾಗಿದೆ ಮತ್ತೊಂದು ತಲೆನೋವು