Select Your Language

Notifications

webdunia
webdunia
webdunia
webdunia

ಮೇಕಪ್ ಮಾಡದೆ ನೀವು ಸುಂದರವಾಗಿ ಕಾಣಬೇಕೆಂದರೆ ಹೀಗೆ ಮಾಡಿ

ಮೇಕಪ್ ಮಾಡದೆ ನೀವು ಸುಂದರವಾಗಿ ಕಾಣಬೇಕೆಂದರೆ ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 25 ಜೂನ್ 2019 (09:17 IST)
ಬೆಂಗಳೂರು : ತಾವು ಸುಂದರವಾಗಿರಬೇಕೆಂದು ಎಲ್ಲಾ ಹುಡುಗಿಯರು ಬಯಸುತ್ತಾರೆ. ಅದರಲ್ಲೂ ಮೇಕಪ್ ಮಾಡಿಕೊಂಡರೆ ಎಲ್ಲಾ ಹುಡುಗಿಯರು ಸುಂದರವಾಗಿ ಕಾಣಿಸುತ್ತಾರೆ. ಆದರೆ ಇದು ತಾತ್ಕಾಲಿಕ. ಆದ್ದರಿಂದ ಮೇಕಪ್ ಮಾಡದೇ ಹುಡುಗಿಯರು ಚೆನ್ನಾಗಿ ಕಾಣಿಸಬೇಕೆಂದರೆ ಹೀಗೆ ಮಾಡಿ.




*1 ಟೊಮೆಟೊವನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. 10 ನಿಮಿಷ ಹಾಗೇ ಬಿಟ್ಟು ನಂತರ ತಣ್ಣಗಿನ ನೀರಿನಿಂದ ತೊಳೆಯಿರಿ. ಇದನ್ನು ಎರಡು ದಿನಕ್ಕೊಮ್ಮೆ ಬಳಸಿ.


*¼ ಚಮಚ ಹಾಲಿನ ಪುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸಂಪೂರ್ಣವಾಗಿ ಒಣಗಲು ಬಿಡಿ. ನಂತರ ಉಗುರಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ತ್ವಚೆಯು ತುಂಬಾ ತಾಜಾ ಮತ್ತು ಪುನಶ್ಚೇತನಗೊಳ್ಳುವುದು.
*2 ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಗೆ 2 ಚಮಚ ಓಟ್ಸ್ ಹಾಗೂ 1 ಚಮಚ ಜೇನುತುಪ್ಪ ಹಾಕಿ ಪೇಸ್ಟ್ ಮಾಡಿ. ಮುಖವನ್ನು ವಾಶ್ ಮಾಡಿ ಬಳಿಕ ಈ ಪೇಸ್ಟ್ ನ್ನು ಹಚ್ಚಿ. ಕೆಲವು ನಿಮಿಷ ಕಾಲ ಹಾಗೆ ಇಡಿ ಬಳಿಕ ನೀರಿನಿಂದ ತೊಳೆಯಿರಿ ನಂತರ ಇದರ ಮೊಶ್ಚಿರೈಸರ್ ಹಚ್ಚಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಈ ಬಗ್ಗೆ ಗಮನಿಸಿ. ಇಲ್ಲವಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ