Select Your Language

Notifications

webdunia
webdunia
webdunia
webdunia

ಪ್ರಿಯಾಂಕ್​​​ ಮಣಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್​​

ಪ್ರಿಯಾಂಕ್​​​ ಮಣಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್​​
ಚಿತ್ತಾಪುರ , ಗುರುವಾರ, 6 ಏಪ್ರಿಲ್ 2023 (18:42 IST)
ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಮಣಿಸಿ, ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯವರು ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಸಕಲ ಸಿದ್ಧತೆ ನಡೆಸಿರುವ ಕಮಲಪಡೆ. ಪ್ರಿಯಾಂಕ ಖರ್ಗೆ ಅವರಿಗೆ ಪ್ರಬಲ ಪೈಪೋಟಿ ಒಡ್ಡಬಲ್ಲ ಅಭ್ಯರ್ಥಿಯನ್ನ ಕಲಬುರಗಿಯ ಚಿತ್ತಾಪುರದಲ್ಲಿ ಕಣಕ್ಕಿಳಿಸಲಿದ್ದಾರೆ. ಸ್ಥಳೀಯವಾಗಿ ಹೆಸರು ಇರುವ ಮತ್ತು ಸಮುದಾಯ ಪರ ಒಲವಿರುವ ವ್ಯಕ್ತಿಗೆ ಮಣೆ ಹಾಕಿದೆ. ಇಷ್ಟು ದಿನ ಮಣಿಕಂಠ್ ರಾಥೋಡ್​​ಗೆ ಟಿಕೆಟ್ ಎನ್ನುತ್ತಿದ್ದ ಕಮಲ ಪಡೆ, ಅವರ ಮೇಲಿನ ರೌಡಿಸಂ ಕೇಸ್ ಹಿನ್ನೆಲೆ ಆಧರಿಸಿ, ಪಾರ್ಟಿಗೆ ಡ್ಯಾಮೇಜ್ ಆಗಬಹುದೆಂಬ ಆತಂಕ‌ದಿಂದ ಮಣಿಕಂಠ್ ಬದಲು ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್​​ಗೆ ಗಾಳ ಹಾಕಿದೆ. 31 ವರ್ಷದ ಚೌಹಾಣ್ ಪರ ಚುನಾವಣಾ ಸಮಿತಿ ಒಲವು ತೋರಿದ್ದು, ಲಂಬಾಣಿ ಸಮುದಾಯದ ಚೌಹಾಣ್ ಪರ ಜಿಲ್ಲಾ ಕೋರ್ ಕಮಿಟಿ ಮತ್ತು ರಾಜ್ಯ ಕೋರ್ ಕಮಿಟಿಯಿಂದ ಹೆಸರು ರವಾನೆಯಾಗಿದೆ. ಈ ನಿಟ್ಟಿನಲ್ಲಿ ಚಿತ್ತಾಪುರದಲ್ಲಿ ಪ್ರಿಯಾಂಕ ಖರ್ಗೆ ಮಣಿಸಲು ಅರವಿಂದ್ ಚೌಹಾಣ್​​ಗೆ ಟಿಕೆಟ್ ನೀಡಲು ನಿರ್ಧಾರಿಸಲಾಗಿದ್ದು, ಗುಜರಾತ್ ಮಾದರಿಯಲ್ಲಿ ಯುವಕರ ಪಡೆ ಕಟ್ಟಲು ಬಿಜೆಪಿ ಸಿದ್ದವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿತೀನ್​​​​ಗೆ ಟಿಕೆಟ್​ ನೀಡುವಂತೆ ​​​​​ರಕ್ತ ಪತ್ರ