ಎಸ್ ಸಿ ಪಿಟಿಎಸ್ ಪಿ ಹಣವನ್ನ ಸರ್ಕಾರ ದುರುಪಯೋಗ ಆರೋಪವನ್ನ ಖಂಡಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರಿಂದ ಪ್ರತಿಭಟನೆ ನಡರಸಲಾಗಿದೆ.ಪ್ರತಿಭಟನೆಯಲ್ಲಿ ಎಮ್‌ಎಲ್ ಸಿ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು,ಎಂ ಶಂಕರಪ್ಪ ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಅಗತ್ಯವಸ್ತುಗಳ ಬೆಲೆ ಏರಿಕೆ ಸೇರಿದಂತೆ ದಲಿತರ ೧೧ ಸಾವಿರ ಕೋಟಿಯನ್ನ ಗ್ಯಾರಂಟಿ ಯೋಜನೆಗೆ ಸರ್ಕಾರ ಬಳಸಿದೆ.ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿ,ಸಿಎಂ ಸಿದ್ದರಾಮಯ್ಯ ದಲಿತರ ವಿರೋಧಿ ಎಂದು ದಿಕ್ಕಾರವನ್ನ ಬಿಜೆಪಿ ನಾಯಕರು ಕೂಗುತ್ತಿದ್ದಾರೆ.