Publish Date: Mon, 23 Apr 2018 (19:43 IST)
Updated Date: Mon, 23 Apr 2018 (19:46 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಮುರಳೀಧರ್ ರಾವ್ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
‘ಒಬ್ಬ ನಾಯಕ ನನ್ನ ಪುತ್ರನಿಗೆ ಟಿಕೆಟ್ ಬೇಡ ಎನ್ನುತ್ತಾರೆ. ಇನ್ನೊಬ್ಬ ನಾಯಕ ನನಗೆ ಎರಡು ಕೊಡಿ, ನನ್ನ ಪುತ್ರನಿಗೂ ಇರಲಿ ಎನ್ನುತ್ತಾರೆ. ಯಾರು ಉತ್ತಮ ಎಂದು ನೀವೇ ನಿರ್ಧರಿಸಿ’ ಎಂದು ಇಬ್ಬರು ನಾಯಕರ ನಡುವೆ ಸಾಮ್ಯತೆ ಮಾಡಿ ಟ್ವೀಟ್ ಮಾಡಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಬಿಎಸ್ ವೈ ಪುತ್ರನಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮುರಳೀಧರ್ ರಾವ್ ಬಿಎಸ್ ವೈ ಪರವಾಗಿ ಟ್ವೀಟ್ ಮಾಡಿದ್ದು, ಆ ಮೂಲಕ ಅವರ ಬೆಂಬಲಿಗರ ಅಸಮಾಧಾನ ಶಮನ ಮಾಡುವ ಯತ್ನ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.