Publish Date: Sat, 21 Apr 2018 (11:13 IST)
Updated Date: Sat, 21 Apr 2018 (11:15 IST)
ಬೆಂಗಳೂರು: ಬಿಜೆಪಿ ನಾಯಕ, ನವರಸನಾಯಕ ಜಗ್ಗೇಶ್ ಗೆ ಈ ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗಲಿಲ್ಲವೆಂದು ಬೇಸರವಾಗಿದೆಯೇ? ಈ ಬಗ್ಗೆ ಅವರು ಟ್ವಿಟರ್ ನಲ್ಲಿ ನೀಡಿರುವ ಸಂದೇಶ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.
ಅಭಿಮಾನಿಯೊಬ್ಬರು ನಿಮ್ಮ ಪಕ್ಷ ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಲ್ಲ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಜಗ್ಗೇಶ್ ಟ್ವೀಟ್ ನಲ್ಲಿ ಈ ಬೇಸರದ ಛಾಯೆ ಕಾಣುತ್ತಿದೆ.
‘ನನ್ನ ಜೀವನ ಸುಮಧುರವಾಗಿದೆ. ನಾನು ಅಧಿಕಾರಶಾಹಿ ರಾಜಕಾರಣಿಯಲ್ಲ. ನನಗೆ ಸಿಗುವುದರಲ್ಲಿ ತೃಪ್ತಿಯಿದೆ. ನನ್ನ ವೃತ್ತಿಯಲ್ಲಿ 2019 ರವರೆಗೆ ನಾನು ತುಂಬಾ ಬ್ಯುಸಿ. ಸಿನಿಮಾ, ಟಿವಿ ಶೋಗಳು, ಎರಡು ದೇವಾಲಯಗಳ ನಿರ್ಮಾಣ ಸೇರಿದಂತೆ ನಾನು ಬ್ಯುಸಿ. ನಾನು ನಗುತ್ತಾ ಬೇರೆಯವರನ್ನು ನಗಿಸುತ್ತಿದ್ದೇನೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಸಿಕ್ಕಿದರಲ್ಲೇ ಖುಷಿಪಡುವುದಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.