Publish Date: Fri, 04 May 2018 (17:06 IST)
Updated Date: Fri, 04 May 2018 (17:07 IST)
ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನು ತಮ್ಮ ನೆಚ್ಚಿನ ನಾಯಕನ ಗೆಲುವಿಗೆ ಅಭಿಮಾನಿಗಳು ವಿನೂತನ ರೀತಿಯಲ್ಲಿ ದೇವರ ಮೊರೆ ಹೋಗುತ್ತಿದ್ದಾರೆ.
ಅದೇ ರೀತಿ ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಗೆಲುವಿಗಾಗಿ ಬಿಜೆಪಿ ಪಕ್ಷದ ನಗರಸಭೆ ಸದಸ್ಯ ಸೇರಿದಂತೆ ಅಭಿಮಾನಿಗಳು ಸುಮಾರು ಒಂದು ಕಿಲೋ ಮೀಟರ್ ವರೆಗೆ ದೀಡ್ ನಮಸ್ಕಾರ ಹಾಕುವ ಮೂಲಕ ದೇವರ ಮೊರೆಗೆ ಹೋಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗೆಲುವಿಗಾಗಿ ಐದು ಜನ ಕಾರ್ಯಕರ್ತರು ದೀಡ್ ನಮಸ್ಕಾರ ಹಾಕಿದ್ರು. ಗದಗ ನಗರದ ಏಳು ಮಕ್ಕಳ ತಾಯಿ ದೇವಸ್ಥಾನದಿಂದ ಪ್ರಾರಂಭವಾದ ದೀಡ್ ನಮಸ್ಕಾರವು ರಾಚೊಟೆಶ್ವರ ದೇವಸ್ಥಾನದ ವರೆಗೆ ಸುಮಾರು 1 ಕಿಲೋಮೀಟರ್ ದೀಡ್ ನಮಸ್ಕಾರ ಹಾಕಿದ್ರು.
22 ನೇ ವಾರ್ಡ್ ಸದಸ್ಯ ಸಂತೋಷ ನೇತೃತ್ವದಲ್ಲಿ ಐದು ಜನ ಕಾರ್ಯಕರ್ತರು ದೀಡ್ ನಮಸ್ಕಾರ ಹಾಕಿದ್ರು. ಈ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿದ್ರು.