Select Your Language

Notifications

webdunia
webdunia
webdunia
Friday, 11 April 2025
webdunia

ಯೋಗಿ ಆದಿತ್ಯನಾಥ್ ಭಾಷಣ ಕೇಳುವವರೇ ಇಲ್ವಂತೆ

ಯೋಗಿ ಆದಿತ್ಯನಾಥ್
ದಾವಣಗೆರೆ , ಶುಕ್ರವಾರ, 4 ಮೇ 2018 (13:39 IST)
ಕರ್ನಾಟಕ ಚುನಾವಣಾ ಕಾವು ದಿನೇ ದಿನೇ ಏರುತ್ತಿದ್ದು, ಕರ್ನಾಟಕ ಚುನಾವಣಾ ಹಿನ್ನಲೆ ಮೊದಲ ಭಾರಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ದಾವಣಗೆರೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ರು.
ಈ ವೇಳೆ ಪೇಟ ತೊಡಿಸಿ, ಕಂಬಳಿ ಹೊದಿಸಿ ಯೋಗಿ ಆದಿತ್ಯನಾಥ್ ಗೆ  ಸನ್ಮಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಸಿಎಂ ಸಿದ್ದರಾಮಯ್ಯ ಸರ್ಕಾರ ಸಮಾಜ ವಿರೋಧಿ ಸರ್ಕಾರ, ಜಿಹಾದಿ ತತ್ವಗಳನ್ನು ಹರಿಯಬಿಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಕಿತ್ತೆಸೆಯುವ ಅಗತ್ಯಯಿದೆ ಎಂದು ವಾಗ್ದಾಳಿ ನಡೆಸಿದ್ರು.
 
ಕರ್ನಾಟಕದಲ್ಲಿ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಯೋಚಿಸಲು ಸಮಯವಿಲ್ಲ. ಬಿ.ಎಸ್. ಯಡಿಯೂರಪ್ಪನವರನ್ನು ಸಿಎಂ ಮಾಡುವುದರ ಮೂಲಕ ವಿಕಾಸ ಪರ್ವ ಆರಂಭ ಮಾಡಿ ಎಂದು ಯೋಗಿ ಕರೆ ನೀಡಿದ್ರು.
 
ಇನ್ನೂ ಸಮಾವೇಶದಲ್ಲಿ ಯೋಗಿ ಭಾಷಣಕ್ಕೆ ನೀರಸ ಪ್ರತಿಕ್ರಿಯೆ ಕಂಡು ಬಂತು. ಭಾಷಣ ಆರಂಭ ವಾಗುತ್ತಿದ್ದಂತೆ ಜನ ಮನೆಯತ್ತ ಹೊರಟರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಮೊಯಿದ್ದೀನ್ ಬಾವಾಗೆ ಹೂಮಾಲೆ: ಸಿಟ್ಟಿಗೆದ್ದ ದೇವರು