Select Your Language

Notifications

webdunia
webdunia
webdunia
webdunia

ಬಿಜೆಪಿಯವರೇ ನನಗೆ ಕಾಂಗ್ರೆಸ್ ಗೆ ಕಳಿಸುವಂತಿದೆ-ಎಸ್ ಟಿ ಸೋಮಶೇಖರ್

ST Somashekhar
bangalore , ಗುರುವಾರ, 17 ಆಗಸ್ಟ್ 2023 (14:03 IST)
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ‌ ಎಸ್ ಟಿ ಸೋಮಶೇಖರ್ ನಮ್ಮ ಕ್ಷೇತ್ರಕ್ಕೆ ಡಿಸಿಎಂ ಡಿಕೆಶಿ ಬಂದಿದ್ರು.ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ, ಇದರ ಬಗ್ಗೆ ಚರ್ಚೆ ಮಾಡಿದ್ದೇನೆ.ಅವರು ಬರೋದರ ಬಗ್ಗೆ ನನಗೆ ಯಾವ ಅಧಿಕಾರಿಯೂ  ಹೇಳಿರಲಿಲ್ಲ.ಆಗ ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ಕೊಟ್ರು.ಈ ವೇಳೆ ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿದ್ದು ಹೌದು.ಇದು ಹೊರತು ಪಡಿಸಿ ನಾನು ಅವರ ಜತೆ ರಾಜಕೀಯ ಮಾತಾಡಿಲ್ಲ.ಇಲ್ಲಿ ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡಿದ್ರು.ನನ್ನ ವಿರುದ್ಧ ಸೋಲಿಸಬೇಕು ಅಂತ ಆಡಿಯೋ ವೈರಲ್ ಮಾಡಿದ್ರು.ಬಿಜೆಪಿಯವರೇ ನನಗೆ ಕಾಂಗ್ರೆಸ್ ಗೆ ಕಳಿಸುವಂತಿದೆ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
 
ಅಲ್ಲದೇ ಡಿಕೆಶಿ ಅವರನ್ನು ಹೊಗಳಿದ್ದನ್ನೇ ಸ್ಥಳೀಯ ಬಿಜೆಪಿಗರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.ಮೈಸೂರಿಗೆ ಹೋಗಿದ್ದಾಗ ಜಿ ಟಿ ದೇವೇಗೌಡರನ್ನೂ ಹೊಗಳ್ತೀನಿ.ನಾನು ಮುಂದೆಯೂ ಬಿಜೆಪಿ ಬಿಡುವ ಪ್ಲಾನ್ ಇಲ್ಲ.ಕಾಂಗ್ರೆಸ್‌ನವರು ಬನ್ನಿ ಅಂತ ಕರೆದಿಲ್ಲ.ನಾನೂ ಹೋಗ್ತೀನಿ ಅಂತ ಅಲ್ಲಿ ಅರ್ಜಿ ಹಾಕಿಲ್ಲ.ಡಿಕೆಶಿಯವರನ್ನು ಹೊಗಳಿದ್ದಕ್ಕೆ ನಾನು ಕಾಂಗ್ರೆಸ್ ಗೆ ಹೋಗ್ತೀನಿ, ಲೋಕಸಭೆಗೆ ಅಪ್ಪ, ವಿಧಾನಸಭೆಗೆ ಮಗ ಅಂತ ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸ್ತಿದಾರೆ ಎಂದು ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್