Select Your Language

Notifications

webdunia
webdunia
webdunia
webdunia

ಬಿಜೆಪಿ ನಮ್ಮ ಯಾತ್ರೆಯಿಂದ ಪ್ಯಾನಿಕ್ ಆಗ್ತಿದ್ದಾರೆ - ಸಿದ್ದರಾಮಯ್ಯ

BJP is panicking about our yatra
bangalore , ಮಂಗಳವಾರ, 24 ಜನವರಿ 2023 (18:29 IST)
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ಅಲ್ಲ ಗಂಗೋತ್ರಿ ಬಿಜೆಪಿ.40% ಕಮೀಷನ್ ಆರೋಪ ನಮ್ಮ ಸರ್ಕಾರದ ಮೇಲೆ ಮಾಡಿದ್ರಾ? ಗುತ್ತಿಗೆದಾರರು ನಮ್ಮ ಸರ್ಕಾರದ ಮೇಲೆ ಪತ್ರ ಬರೆದಿದ್ದರಾ?ಯಾವ ಆಧಾರದಲ್ಲಿ ಇವ್ರು ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ.ಸುಧಾಕರ್ ಹಗರಣ ಅಂತ ಹೇಳಿದ್ದಾರೆ. ಅದು ಹಗರಣ ಅಲ್ಲ.ಎಜಿ ರಿಪೋರ್ಟ್ ನಲ್ಲಿ ವ್ಯತ್ಯಾಸ ಇದೆ ಅಂತ ಹೇಳಿದ್ರು ಅಷ್ಟೆ.ಯಾವ್ ಯಾವ್ ಇಲಾಖೆಯಲ್ಲಿ ವ್ಯತ್ಯಾಸ ಇದೆ ಅಂತ‌ ನನಗೆ ಗೊತ್ತಿಲ್ಲ.
 
ಸುಧಾಕರ್ ನಮ್ಮ ಜೊತೆ ಇದ್ದವನು. ಆಗ ಯಾಕೆ ಏನು ಹೇಳಲಿಲ್ಲ.ಈಗ ಹೇಳಿದ್ರೆ ಹೇಗೆ. ಅದಕ್ಕೆ ಕಿಮ್ಮತ್ತು ಇದೆಯಾ?.ಆಯ್ತು ನಾವು ಭ್ರಷ್ಟಾಚಾರ ಮಾಡಿದ್ರೆ ವಿಪಕ್ಷದಲ್ಲಿ ಬಿಜೆಪಿ ಇತ್ತು ಯಾಕೆ ರೈಸ್ ಮಾಡಿಲ್ಲ.ನಾವು 40%,ಕೋವಿಡ್ ಹಗರಣ ಅಂತ ಹೆಳಿದಾಗ ಅದನ್ನ ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ.ಬೊಮ್ಮಾಯಿ ವಿಪಕ್ಷದಲ್ಲಿ ಇದ್ದಾಗ ಯಾಕೆ ಮಾತಾಡಲಿಲ್ಲ.ಬಿಜೆಪಿ ನಮ್ಮ ಯಾತ್ರೆಯಿಂದ ಪ್ಯಾನಿಕ್ ಆಗ್ತಿದ್ದಾರೆ.ಸೋಲುವ ಭಯದಲ್ಲಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ.
 
ನೀವು ವಿಪಕ್ಷ ಇದ್ದಾಗ ಬಾಯಿಗೆ ಕಡುಬು ಇಟ್ಟು ಕೊಂಡಿದ್ರಾ?ಆಯ್ತು ಅಕ್ರಮ ಆಗಿದೆ ಒಂದು ಕೆಲಸ ಮಾಡಿ.ನಮ್ಮದು ನಿಮ್ಮದು ಸೇರಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ.ಯಾರೇ ತಪ್ಪು ‌ಮಾಡಿದ್ರು ಶಿಕ್ಷೆ ಆಗಲಿ. ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಸಿದ್ದರಾಮಯ್ಯ  ಬಿಜೆಪಿ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮೈಕೊರೆಯುವ ಚಳಿಯ ಮಧ್ಯೆ ಮಳೆ ಸಾದ್ಯತೆ