Webdunia - Bharat's app for daily news and videos

Install App

BJPಯವರು ಇತಿಹಾಸ ತಿರುಚಲು ಹೊರಟಿದ್ದಾರೆ-KPCC ಅಧ್ಯಕ್ಷ D.K. ಶಿವಕುಮಾರ್​​

Webdunia
ಸೋಮವಾರ, 20 ಮಾರ್ಚ್ 2023 (17:15 IST)
ರಾಜ್ಯದಲ್ಲಿ ಉರಿಗೌಡ-ನಂಜೇಗೌಡ ಉರಿ, ನಂಜು ಜೋರಾಗಿದೆ.. ಚುನಾವಣೆ ಸಮೀಪಿಸುತ್ತಿದ್ದು ಉರಿಗೌಡ-ನಂಜೇಗೌಡ ಚರ್ಚೆ ಜೋರಾಗೇ ನಡೀತಿದೆ.. ಉರಿಗೌಡ-ನಂಜೇಗೌಡ ವಿಚಾರ ಕುರಿತು KPCC ಅಧ್ಯಕ್ಷ D.K. ಶಿವಕುಮಾರ್​​ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, BJPಯವರು ಇತಿಹಾಸ ತಿರುಚಲು ಹೊರಟಿದ್ದಾರೆ. ಬಸವಣ್ಣ, ಕುವೆಂಪು ಇತಿಹಾಸ ತಿರುಚಿದ್ದಾರೆ.. ಇದೀಗ ಟಿಪ್ಪು ಇತಿಹಾಸ ತಿರುಚಲು ಹೊರಟಿದ್ದಾರೆ ಎಂದು ಕಿಡಿಕಾರಿದ್ರು. ಸಚಿವ ಅಶ್ವಥ್ ನಾರಾಯಣ, ಶಾಸಕ C.T. ರವಿ, ಸಚಿವ ಮುನಿರತ್ನ ಸಿನಿಮಾ ಮಾಡಲು ಹೊರಟಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ 50 ಪುಸ್ತಕ ಇದೆ. ಅವರ ಚರಿತ್ರೆ ಅದರಲ್ಲಿ ಇದೆ.. ಈಗ ಹೊಸದಾಗಿ ಉರಿಗೌಡ-ನಂಜೇಗೌಡರನ್ನು ಹುಟ್ಟುಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದು ಕಾಲ್ಪನಿಕ ಕತೆ, ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದ್ರು. BJP ತಿರುಚಿದ ಇತಿಹಾಸದ ವಿರುದ್ಧ ಹೋರಾಟ ಮಾಡಬೇಕು, ನಿರ್ಮಲಾನಂದನಾಥ ಸ್ವಾಮೀಜಿ ಹೋರಾಟ ನೇತೃತ್ವ ವಹಿಸಬೇಕು ಎಂದು ಡಿ‌ಕೆಶಿ ಒತ್ತಾಯಿಸಿದ್ರು. ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಂಸದ D.K. ಸುರೇಶ್​, ಯಾರನ್ನು ಬೇಕಾದರು ಬಿಟ್ಟು ವ್ಯಾಪಾರ ಮಾಡುವ ಪ್ರವೃತಿ ಇರುವ ವ್ಯಕ್ತಿ ಸಚಿವ ಮುನಿರತ್ನ.. ಆ ವ್ಯಕ್ತಿಯನ್ನು ನಿರ್ಮಲಾನಾಥನಂದ ಶ್ರೀ ಯಾಕೆ ಕರೆಸಿದ್ರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments