Select Your Language

Notifications

webdunia
webdunia
webdunia
webdunia

ಬಿಜೆಪಿ ಪಕ್ಷವು ಬಸವಣ್ಣರಂತಹ ವಿಚಾರಶೀಲರನ್ನ ಹೊಂದಿದೆ: ಹೆಚ್.ಕೆ ಸುರೇಶ್

BJP has thinkers like Basavanna
bangalore , ಭಾನುವಾರ, 7 ಮೇ 2023 (20:00 IST)
ಬಿಜೆಪಿ ಪಕ್ಷವು ಇದಾಗಲೇ ಕೆಂಪೇಗೌಡರAತಹ ನಾಯಕರನ್ನು, ಬಸವಣ್ಣನಂತಹ ವಿಚಾರಶೀಲರನ್ನು ಪಡೆದಿದೆ. ಈ ಪಕ್ಷಕ್ಕೆ ಮತಹಾಕುವುದರ ಮೂಲಕ ನಮ್ಮ ನಾಡನ್ನು ಮತ್ತೆ ಸುವರ್ಣ ಯುಗದತ್ತ ಕೊಂಡೊಯ್ಯುವ ಕಾರ್ಯವನ್ನು ಸಮಾಜ ಮಾಡಬೇಕಿದೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.
 
 ಬೇಲೂರಿನ ನೇರ್ಲಿಗೆಯಲ್ಲಿ ಮಾತನಾಡಿದ ಅವರು, ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕಾದರೆ ನಾಡಿನ ಇತಿಹಾಸದ ಕುರಿತಾದ ಅರಿವಿರಬೇಕು. ಸಾಮಾನ್ಯವಾಗಿ ಬಿಜೆಪಿ ನಾಯಕರಿಗೆ ಇದರ ಅರಿವು ಇರುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯೇ ಅವರ ಭವಿಷ್ಯವನ್ನು ಎತ್ತಿ ಹೇಳುತ್ತಿದೆ. ಜನರೇ ಅವರ ಮೇಲೆ ತಿರುಗಿ ಬಿದ್ದಿದ್ದಾರೆ. ನರೇಂದ್ರ ಮೋದಿಯವರು ಹನುಮಂತನ ಅವತಾರವೇ ಆಗಿದ್ದಾರೆ. ಇಂತಹ ದೈವಭೂಮಿಯಲ್ಲಿ ನಾವು ನೆಲೆಸಿ ಬಿಜೆಪಿಗೆ ಮತ ಹಾಕುವ ಮೂಲಕ ಸಮಾಜ ಸೇವೆಯಯನ್ನು ಮಾಡೋಣ. ಬೇಲೂರಿನ ಸಮಗ್ರ ಅಭಿವೃದ್ಧಿಯ ಕಾರ್ಯಕ್ಕೆ ಕೈ ಜೋಡಿಸೋಣ.  ಸಮಾಜ ಸೇವೆಯೆಂದರೆ ಉತ್ತಮ ಆಡಳಿತಕ್ಕೆ ಬೆಂಬಲವನ್ನು ಸೂಚಿಸುವುದೂ ಆಗಿದೆ. ನೀವು ನನ್ನನ್ನು ಗೆಲ್ಲಿಸುವ ಮೂಲಕ ಬೇಲೂರಿನ ಜಯವನ್ನು ನೋಡುತ್ತೀರಿ ಎನ್ನುವ ನಂಬಿಕೆ ನನ್ನಲ್ಲಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ ಪಿ ಶಕ್ತಿ ಪ್ರದರ್ಶನ