Daily Horoscope

Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬಿಜೆಪಿ, ಏನ್ ವಿಷಯ ಗೊತ್ತಾ

Kerala State New Mayor
Photo Credit X
ಕೇರಳ ರಾಜ್ಯದಲ್ಲಿ ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಅವರು ಮೊದಲ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. 

ಭಾರತೀಯ ಜನತಾ ಪಕ್ಷವು ಮೊದಲ ಬಾರಿಗೆ ತಿರುವನಂತಪುರಂ ಕಾರ್ಪೊರೇಶನ್‌ನ ನಿಯಂತ್ರಣವನ್ನು ಪಡೆದುಕೊಂಡಿತು, ನಾಲ್ಕು ದಶಕಗಳ ಎಡ ಆಡಳಿತವನ್ನು ಕೊನೆಗೊಳಿಸಿತು, ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆಯ ನಡುವೆ ವಿ ವಿ ರಾಜೇಶ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಹಿನ್ನೆಲೆಯಲ್ಲಿ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಿತು. ಬಿಜೆಪಿಗೆ ಮೇಯರ್ ಗದ್ದುಗೆ ಹಿಡಿಯಲು ಒಂದು ಸ್ಥಾನ ಕೊರತೆ ಇತ್ತು. ಈ ವೇಳೆ ಪಕ್ಷೇತರ ಸದಸ್ಯರೊಬ್ಬರು ಬಿಜೆಪಿ ಬೆಂಬಲಿಸುವ ಮೂಲಕ (51) ವಿವಿ ರಾಜೇಶ್ ಮೇಯರ್ ಆಗಿ ಗೆಲುವಿನ ನಗೆ ಬೀರಲು ಕಾರಣರಾದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಸ್ಪೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ 2 ಕ್ಕೆ ಏರಿಕೆ