Publish Date: Tue, 22 Oct 2019 (18:56 IST)
Updated Date: Tue, 22 Oct 2019 (18:58 IST)
ಬಿಜೆಪಿ ಇವಿಎಂ ಮಷಿನ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಂತ ಗಂಭೀರ ಆರೋಪ ಮತ್ತೊಮ್ಮೆ ಕೇಳಿಬಂದಿದೆ.
ಇವಿಎಂ ಮಷಿನ್ ದುರ್ಬಳಕೆ ನಡೆಯುತ್ತಿದೆ ಅಂತ ನನಗೂ ಇದೀಗ ಅನಿಸುತ್ತಿದ್ದು, ಬಿಜೆಪಿ ಇವಿಎಂ ಮಷಿನ್ ಅಷ್ಟೇ ಅಲ್ಲದೇ ಚುನಾವಣೆ ಆಯೋಗವನ್ನು ಕೂಡಾ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಇವಿಎಂ ಗಳ ದುರ್ಬಳಕೆಯನ್ನು ಕೇವಲ ಆಯ್ಕೆ ಮಾಡಲಾದ ಬೂತ್ ಗಳಲ್ಲಿ ಮಾತ್ರ ಮಾಡುತ್ತವೆ. ಪ್ರಪಂಚದಲ್ಲಿ ಅನೇಕ ರಾಷ್ಟ್ರ ಗಳು ಬ್ಯಾಲೆಟ್ ಪೇಪರ್ ಗಳ ಬಳಕೆ ಮಾಡುತ್ತಿದ್ದು, ಭಾರತದಲ್ಲಿ ಮಾತ್ರ ಬ್ಯಾಲೆಟ್ ಪೇಪರ್ ಗಳಿಂದ ಇವಿಎಂ ಮಷಿನ್ ಬಳಕೆ ಮಾಡಲಾಗುತ್ತಿದೆ ಎಂದರು.
ಮಹಾರಾಷ್ಟ್ರ, ಹರಿಯಾಣ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಗಳು ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿವೆ. ಚುನಾವಣಾ ಫಲಿತಾಂಶ ಬಂದ ಮೇಲೆ ನೋಡೋಣ. ಜನರು ಯಾವ ತೀರ್ಪು ಕೊಡುತ್ತಾರೆ ಅದನ್ನು ಒಪ್ಪಿಕೊಳ್ಳಲೇಬೇಕು ಅಂತ ಸಿದ್ದರಾಮಯ್ಯ ಹೇಳಿದ್ದಾರೆ.