Select Your Language

Notifications

webdunia
webdunia
webdunia
webdunia

ಜೆಡಿಎಸ್ ಮುಖಂಡನ ಬಾಯಲ್ಲಿ ಗನ್ ಇಟ್ಟ ಪೊಲೀಸ್ ಅಧಿಕಾರಿ?: ಭಾರೀ ಪ್ರತಿಭಟನೆ

ಜೆಡಿಎಸ್ ಮುಖಂಡನ ಬಾಯಲ್ಲಿ ಗನ್ ಇಟ್ಟ ಪೊಲೀಸ್ ಅಧಿಕಾರಿ?:  ಭಾರೀ ಪ್ರತಿಭಟನೆ
ಯಾದಗಿರಿ , ಮಂಗಳವಾರ, 22 ಅಕ್ಟೋಬರ್ 2019 (18:44 IST)
ಸಿಎಂ ಕಾರು ಅಡ್ಡ ಬಂದು ಕಪ್ಪು ಬಾವುಟ ಪ್ರದರ್ಶನ ಮಾಡಿರೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಜೆಡಿಎಸ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನೇತೃತ್ವದಲ್ಲಿ ಯಾದಗಿರಿ ನಗರ ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುತ್ತಿದೆ.

ಬಂಧನಕ್ಕೊಳಗಾದ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಅಕ್ಟೋಬರ್ 5 ರಂದು ಮುಖ್ಯಮಂತ್ರಿ ವಾಹನ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶನ ಮಾಡಿರೋ ಹಿನ್ನೆಲೆ ವಿಚಾರಣೆಗೆಂದು ವಶಕ್ಕೆ ಪಡೆದು ಪೊಲೀಸರು ಜೆಡಿಎಸ್ ಮುಖಂಡರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಜೆಡಿಎಸ್ ಕಾರ್ಯಕರ್ತ ಮಾರ್ಥಾಂಡಪ್ಪ ಬಾಯಲ್ಲಿ ಗನ್ ಇಟ್ಟು ಬೆದರಿಕೆಯನ್ನು ಪೊಲೀಸರು ಹಾಕಿದ್ದಾರೆ ಎಂದು ಜೆಡಿಎಸ್ ದೂರಿದೆ.

ಘಟನೆಗೆ ಕಾರಣ ಶರಣಗೌಡ ಕಂದಕೂರ ಹೆಸರು ಹೇಳುವಂತೆ ಒತ್ತಡ ಹೇರಿದ್ದಾರೆ ಪೊಲೀಸರು ಅಂತ ದೂರಲಾಗುತ್ತಿದೆ.

ನಗರ ಠಾಣೆ ಎದುರು ನೂರಾರು ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಿದ್ರು. ನಗರ ಪೊಲೀಸ್ ಠಾಣೆ ಪಿಎಸ್ ಐ ಬಾಪುಗೌಡ ಪಾಟೀಲ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಮಗಾರಿಗೆ ಬ್ರೇಕ್ ಹಾಕಿದ ಸರಕಾರ : ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಖರ್ಗೆ