Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರ ಸೇರ್ಪಡೆ: ವಿದ್ಯಾರ್ಥಿಗಳಿಂದ ಗೀತೆ!

ಬಿಜೆಪಿ ನಾಯಕರ ಸೇರ್ಪಡೆ: ವಿದ್ಯಾರ್ಥಿಗಳಿಂದ ಗೀತೆ!
ಕಾರವಾರ , ಬುಧವಾರ, 30 ಜನವರಿ 2019 (19:28 IST)
ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ  ಸ್ವಾಗತ ಗೀತೆಯನ್ನ ಶಾಲಾ ವಿದ್ಯಾರ್ಥಿಗಳಿಂದ ಬಿಜೆಪಿ ನಾಯಕರು ಹಾಡಿಸಿದ ಘಟನೆ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗ್ರಾಮೀಣ ಭಾಗದಲ್ಲಿ ಈ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡಿನ ದನಗರಹಳ್ಳಿಯಲ್ಲಿ ಗ್ರಾಪಂ ಸದಸ್ಯ ನಟರಾಜ್ ಹೊಸೂರ್ ಅವರ ಜಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥಿಸಲು ಸರಕಾರಿ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಯಿತು. ಅದೂ ಕೂಡಾ ಶಾಲಾ ಅವಧಿಯಲ್ಲಿಯೇ ಎನ್ನುವುದು ಗಮನಾರ್ಹ.

ಇದು ಸಚಿವರ ಗಮನಕ್ಕೆ ಮುಂಚೆಯೇ ಇಲ್ಲವೆಂದಾದರೂ ನಂತರವಾದರೂ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಂತೆ ನೋಡಬಹುದಿತ್ತು ಎನ್ನುವ ಆಕ್ಷೇಪ ಕೇಳಿಬಂತು.



Share this Story:

Follow Webdunia kannada

ಮುಂದಿನ ಸುದ್ದಿ

ನೂರಾರು ಗಾಂಧಿಯವರ ನಡಿಗೆ ಸೌಹಾರ್ದತೆ ಕಡೆಗೆ