Publish Date: Wed, 30 Jan 2019 (19:21 IST)
Updated Date: Wed, 30 Jan 2019 (19:24 IST)
70 ನೇ ಗಾಂಧಿಜೀ ಹುತಾತ್ಮ ದಿನದ ಅಂಗವಾಗಿ "ನೂರಾರು ಗಾಂಧಿಯವರ ನಡಿಗೆ ಸೌಹಾರ್ದತೆ ಕಡೆಗೆ" ಎಂಬ ಸ್ಲೋಗನ್ ಅಡಿಯಲ್ಲಿ ಮೆರವಣಿಗೆ ನಡೆಯಿತು.
ಹಾವೇರಿಯಲ್ಲಿ ಎಸ್ ಎಫ್ ಐ ವತಿಯಿಂದ ಮೆರವಣಿಗೆ ನಡೆಸಲಾಯಿತು. ಇನ್ನು ಈ ಮೆರವಣಿಗೆಯು ಸಿದ್ದಪ್ಪ ಸರ್ಕಲ್ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿ ವೃತ್ತದವರಗೆ ಬಂದು ತಲುಪಿತು.
ನಂತರ ಸಮಾಜದಲ್ಲಿ ಕೋಮುವಾದ ಹೆಚ್ಚಾಗುತ್ತಿದೆ. ಕೋಮುವಾದದಿಂದಲೆ ನಮ್ಮ ರಾಷ್ಟ್ರಪಿತನನ್ನ ಕಳೆದುಕೊಂಡಿದ್ದೇವೆ. ದಯಮಾಡಿ ನಾವೆಲ್ಲರೂ ಒಂದು ಇಲ್ಲಿ ಜಾತಿಬೇಧ ಬೇಡ ಒಂದಾಗಿ ಬಾಳೋಣ. ಸುಂದರ ಸಮಾಜ ನಿರ್ಮಾಣಮಾಡೋಣ ಎಂದು ಸಾರಿದರು.