Webdunia - Bharat's app for daily news and videos

Install App

ಹಕ್ಕಿ ಜ್ವರ: ಈ ಭಾಗಗಳಲ್ಲಿ ಏಕಾಏಕಿ ಕೋಳಿ, ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ

Sampriya
ಶುಕ್ರವಾರ, 14 ಫೆಬ್ರವರಿ 2025 (20:55 IST)
Photo Courtesy X
ಬೆಂಗಳೂರು: ಆಂಧ್ರಪ್ರದೇಶ ಮತ್ತು ಜಾರ್ಖಂಡ್ ಸೇರಿದಂತೆ ಕೆಲವು ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ ಮೊಟ್ಟೆ ಮತ್ತು ಕೋಳಿ ಉತ್ಪನ್ನಗಳ ಬೆಲೆಯಲ್ಲಿ ಶೇಕಡಾ 20-30 ರಷ್ಟು ಕುಸಿತ ಕಂಡಿವೆ.

ಈ ಬಗ್ಗೆ ಶ್ರೀನಿವಾಸ ಫಾರ್ಮ್ಸ್ ಅಧ್ಯಕ್ಷ ಸುರೇಶ ಚಿತ್ತೂರಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಹಕ್ಕಿ ಜ್ವರದ ಭೀತಿಯಿಂದ ಹೈದರಾಬಾದ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕೋಳಿ ಬೆಲೆಯಲ್ಲಿ ಶೇಕಡಾ 25-30 ರಷ್ಟು ಕಂಡಿವೆ ಎಂದರು.

ಹೈದರಾಬಾದ್‌ನಲ್ಲಿ ಮೂರು ದಿನಗಳ ಹಿಂದೆ ₹180 ಇದ್ದ ಮೊಟ್ಟೆಯ ಬೆಲೆ ಗುರುವಾರ ₹150ಕ್ಕೆ (30 ಮೊಟ್ಟೆಗೆ) ಇಳಿಕೆಯಾಗಿದೆ. ಆದಾಗ್ಯೂ, ತಮಿಳುನಾಡಿನ ನಾಮಕ್ಕಲ್‌ನಲ್ಲಿರುವ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ ವಕ್ತಾರರು, ದೇಶದ ಹೆಚ್ಚಿನ ಭಾಗಗಳಲ್ಲಿ ಮೊಟ್ಟೆಯ ಬೆಲೆ ಸ್ಥಿರವಾಗಿದೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಸದ್ಯ 100 ಮೊಟ್ಟೆಗೆ ₹465 ಇದೆ.

ಪಶ್ಚಿಮ ಗೋದಾವರಿ ಸುತ್ತಮುತ್ತ ಆಂಧ್ರಪ್ರದೇಶದಲ್ಲಿ ಬೆಲೆಗಳು ಹೊಡೆತ ಬಿದ್ದಿವೆ. ತಮಿಳುನಾಡಿನಲ್ಲಿ, ಥೈ ಪೂಸಂ ಸಮಯದಲ್ಲಿ ಬಳಕೆ ಕಡಿಮೆಯಾಗಿದೆ ಆದರೆ ಈಗ ಬೇಡಿಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಕೋಳಿ ರೈತರು ಮತ್ತು ತಳಿಗಾರರ ಸಂಘದ (ಕೆಪಿಎಫ್‌ಬಿಎ) ನಿಕಟಪೂರ್ವ ಅಧ್ಯಕ್ಷ ಸುಶಾಂತ್ ರೈ ಅವರು ಪ್ರತಿಕ್ರಿಯಿಸಿ, ಕಳೆದ ವಾರದಲ್ಲಿ ಬೆಲೆಯಲ್ಲಿ ಸುಮಾರು 10-20 ಪ್ರತಿಶತದಷ್ಟು ಇಳಿಕೆಯಾಗಿದೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments