Select Your Language

Notifications

webdunia
webdunia
webdunia
webdunia

ಮಗನ ಅದ್ಧೂರಿ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನೀತಾ ಅಂಬಾನಿ

Indian philanthropist and businesswoman Neeta Ambani, Anant Ambani Marriage, Radhika Merchent Neeta Ambani

Sampriya

ಬೆಂಗಳೂರು , ಶುಕ್ರವಾರ, 14 ಫೆಬ್ರವರಿ 2025 (18:49 IST)
Photo Courtesy X
ಬೆಂಗಳೂರು: ಕಳೆದ ವರ್ಷ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಶನ್‌ ಸ್ಥಾಪಕಿ ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿಯ ವೈಭವೋಪೇತ ವಿವಾಹ ಸಮಾರಂಭ ದೇಶದ ಗಮನ ಸೆಳೆದಿತ್ತು. ಅದಲ್ಲದೆ ಈ ಮದುವೆಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು.

ಹಲವು ಟೀಕೆಗಳ ಮಧ್ಯೆ ನೀತಾ ಅಂಬಾನಿ ಅವರು ಇದೀಗ ಮಗನ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯಾವ ತಂದೆ- ತಾಯಿಗೆ ಆಗಲಿ ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬ ಕನಸಿರುತ್ತದೆ. ದೇವರ ದಯೆಯಿಂದ ಅದು ನೆರವೇರಿತು ಎಂದು ಪ್ರತಿಕ್ರಿಯಿಸಿದ್ದಾರೆ.

ನಮ್ಮ ಕನಸು ಈಡೇರಿದ್ದಲ್ಲದೇ ಈ ಮದುವೆ ಮೇಡ್ ಇನ್ ಇಂಡಿಯಾ ಬ್ರ್ಯಾಂಡ್‌ನ ಪರಿಕಲ್ಪನೆ. ಆ ಪರಿಕಲ್ಪನೆ ಯಶಸ್ವಿಯಾಯಿತು. ಮದುವೆಯಲ್ಲಿ ಭಾರತೀಯ ಶ್ರೀಮಂತ ಪರಂಪರೆ ರಾರಾಜಿಸಿತು. ಆ ಬಗ್ಗೆ ಹೆಚ್ಚೆನೂ ಹೇಳುವುದಿಲ್ಲ ಎಂದರು.

ಈ ವೇಳೆ ಮಗನ ಆರೋಗ್ಯ ಸಮಸ್ಯೆಯನ್ನು ಅವರು ಹೇಳಿದರು. ಅಸ್ತಮಾ ಇದ್ದಿದ್ದರಿಂದ ಮಗ ಅನಂತ್‌ನಿಗೆ ಬಾಲ್ಯದಲ್ಲಿಯೇ ಸ್ಥೂಲಕಾಯ ಆವರಿಸಿಕೊಂಡಿತು. ಆದರೂ ಅವನು ಚಿಂತೆ ಮಾಡಲಿಲ್ಲ. ನಾನು ಹೊರಗೆ ಹೇಗೆ ಕಾಣುತ್ತೇನೆ ಎಂಬುದು ಮುಖ್ಯವಲ್ಲ ಅಮ್ಮಾ, ನನ್ನ ಒಳಗಿನ ಹೃದಯ ಹೇಗಿದೆ ಎಂಬುದು ಮುಖ್ಯವೆಂದು ಹೇಳಿ ಹಸೆಮಣೆ ಏರಿದಾಗ ನಮಗಾದ ಆನಂದ ಅಷ್ಟಿಷ್ಟಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Good News: ಅಳಿವಿನಂಚಿನಲ್ಲಿರುವ ಬೂದು ತೋಳ ಬಂಕಾಪುರ ತೋಳಧಾಮದಲ್ಲಿ ಹೆಚ್ಚಳ